Share this news

ಕಾರ್ಕಳ:ಮಕ್ಕಳಿಗೆ ಕೇವಲ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಕೊಟ್ಟರೆ ಸಾಲದು,ಶಿಕ್ಷಣದ ಜತೆಗೆ ಸಂಸ್ಕೃತಿ, ಧಾರ್ಮಿಕ ವಿಚಾರಗಳು, ರಾಷ್ಟ್ರೀಯತೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಕಾರ್ಕಳ ಶಿರ್ಡಿ ಸಾಯಿಬಾಬ ಕಾಲೇಜು ಉಪನ್ಯಾಸಕ ಆಶಿಷ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಅಜೆಕಾರು ಶ್ರೀರಾಮ ಯಕ್ಷ ಕಲಾಭಿಮಾನಿ ಬಳಗದ ವತಿಯಿಂದ ಫೆ.14ರಂದು ಅಜೆಕಾರು ಬಸ್ ‌ನಿಲ್ದಾಣದ ಬಳಿ ನಡೆದ ಅಶಕ್ತರಿಗೆ ವೈದ್ಯಕೀಯ ನೆರವು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ,ನಾವು ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲಿಗೆ ಮಾನವೀಯ ಮೌಲ್ಯಗಳುಳ್ಳ ಉತ್ತಮ ಪುಸ್ತಕಗಳು, ರಾಷ್ಟ್ರ ಜಾಗೃತಿಯ ಹಾಗೂ ಧರ್ಮ ಜಾಗೃತಿಯ ವಿಚಾರಗಳನ್ನು ಮಕ್ಕಳ ‌ಮನಸ್ಸಿಗೆ ಬಿತ್ತುವ ಕೆಲಸವಾಗಬೇಕಿದೆ ಎಂದರು. ನಾವು ದೇಶವನ್ನು ಕಟ್ಟುವ ಕೆಲಸ ಮಾಡಬೇಕೇ ಹೊರತು ದೇಶ ವಿಭಜಿಸುವ ಕೆಲಸ ಮಾಡಬಾರದು, ಪರಧರ್ಮವನ್ನು ಗೌರವಿಸುವ ಜತೆಜತೆಗೆ ನಮ್ಮ ಧರ್ಮದ ಆಚಾರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಶಾಂತ ಶೆಟ್ಟಿ ಕುಂಠಿನಿ, ಧಾರ್ಮಿಕ ಜಾಗೃತಿಯ ಜತೆಗೆ ಅಶಕ್ತ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡುವ ಶ್ರೀರಾಮ ಯಕ್ಷ ಕಲಾಭಿಮಾನಿ ಸಂಘದ ಅಧ್ಯಕ್ಷ ರತ್ನಾಕರ ಅಮೀನ್ ಬಳಗದ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಕಾಡುಹೊಳೆ ಜಂಗಮೇಶ್ವರ ಮಠದ ಅರ್ಚಕ
ರಾಘವೇಂದ್ರ ಭಟ್,ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್ ಶೆಟ್ಟಿ, ಮಂಜುನಾಥ ಪೂಜಾರಿ, ಉದ್ಯಮಿ ತಾರಾನಾಥ ಪೂಜಾರಿ, ಜಯರಾಮ ಶೆಟ್ಟಿ ಎಣ್ಣೆಹೊಳೆ, ಪ್ರಶಾಂತ ಶೆಟ್ಟಿ ,ಹರೀಶ್ ನಾಯಕ್, ಗುರುಪ್ತಸಾದ್ ಶೆಟ್ಟಿ, ವಿಖ್ಯಾತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅಶಕ್ತರಾದ ವಿಕಲ ಚೇತನ ಸುಲೋಚನ ಶೆಟ್ಟಿ, ಬಡ ಯಕ್ಷಗಾನ ಕಲಾವಿದ ಪ್ರಶಾಂತ ಪೂಜಾರಿ ಹಾಗೂ ಸರೋಜಿನಿ ನಾಯ್ಕ್ ಕಾಡುಹೊಳೆ ಅವರಿಗೆ ವೈದ್ಯಕೀಯ ನೆರವನ್ನು ವಿತರಿಸಲಾಯಿತು.
ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್ ಶೆಟ್ಟಿ ಹಾಗೂ ಕಲಾಸಂಗಮ ಮಂಗಳೂರು ಇದರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಶ್ರೀರಾಮ ಯಕ್ಷ ಕಲಾಭಿಮಾನಿ ಬಳಗದ ಅಧ್ಯಕ್ಷ ರತ್ನಾಕರ ಅಮಿನ್ ಗೌರವಿಸಿದರು.
ಅಕ್ಷತಾ ಸಂದೀಪ್ ಸ್ವಾಗತಿಸಿ, ಸುಕೇಶ್ ಶೆಟ್ಟಿ ವಂದಿಸಿದರು. ‌
ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿದರು.
ಸಭಾ ಕಾರ್ಯಕ್ರಮದ ಬಳಿಕ ಶಿವದೂತೆ ಗುಳಿಗೆ ಎನ್ನುವ ಅದ್ಭುತ ಧಾರ್ಮಿಕ ತುಳು ನಾಟಕ ಪ್ರದರ್ಶನವಾಯಿತು‌.

 

 

Leave a Reply

Your email address will not be published. Required fields are marked *