ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರಿನ ಉದ್ಯಮಿಯೊಬ್ಬರು ಮಂಗಳವಾರ ಸಂಜೆ ಹೆರ್ಮುಂಡೆಯ ತನ್ನ ಗೇರುಬೀಜ ಕಾರ್ಖಾನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಜೆಕಾರಿನ ನಿವಾಸಿ ನಕುಲದಾಸ್ ಪೈ(55) ಎಂಬವರು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ.ಮಂಗಳವಾರ ಸಂಜೆ ಕೆಲಸಗಾರರು ಹೋದ ಬಳಿಕ ಈ ಕೃತ್ಯ ಎಸಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಯಮದಲ್ಲಿ ಭಾರೀ ನಷ್ಟ ಉಂಟಾಗಿರುವುದರಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ
ಅಜೆಕಾರು ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.