ಅಜೆಕಾರು : ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಬೊಂಡುಕುಮೇರಿ ಎಂಬಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಬೊಂಡುಕುಮೇರಿಯ ಲಿಗೋರಿ.ಪಿ ಡಿಸೋಜ (65ವ) ಮೃತಪಟ್ಟವರು.
ಅವರು ಬೆಳಿಗ್ಗೆ ಮನೆಯಲ್ಲಿ ತಿಂಡಿ ಮುಗಿಸಿ ಕೆಲಸಕ್ಕೆ ಹೋಗಿದ್ದವರು ಮಧ್ಯಾಹ್ನದ ವೇಳೆ ತಲೆ ತಿರುಗಿ ಕುಸಿದು ಬಿದ್ದಿದ್ದರು. ಲಿಗೋರಿ ಅವರಿಗೆ ಬಿಪಿ ಸಮಸ್ಯೆಯಿದ್ದು ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದು ಗಾಯಗೊಂಡ ಅವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಲಿಗೋರಿ ಪಿ ಡಿಸೋಜ ಅವರು ಮೃತಪಟ್ಟಿದ್ದರು
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ