Share this news

ಕಾರ್ಕಳ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಅಜೆಕಾರು ಕುರ್ಪಾಡಿ ರಸ್ತೆಯ ಪೊಲೀಸ್ ಠಾಣೆ ಬಳಿಯ ನಿವಾಸಿ ಉಮೇಶ್ ಶೆಟ್ಟಿ ಎಂಬವರ ಶವವು ಅಜೆಕಾರು ಮಾರ್ಕೆಟ್ ಬಳಿಯ ಬಾವಿಯೊಂದರಲ್ಲಿ ಶನಿವಾರ ಕೊಳೆತಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿವಾಹಿತರಾಗಿದ್ದ ಉಮೇಶ್ ಶೆಟ್ಟಿ ಅವರು ಮದ್ಯಪಾನದ ಚಟ ಹೊಂದಿದ್ದರು ಎನ್ನಲಾಗಿದ್ದು, ನಡೆದುಕೊಂಡು ಹೋಗುತ್ತಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

 

 

 

 

 

Leave a Reply

Your email address will not be published. Required fields are marked *