ಕಾರ್ಕಳ: ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘ (ನಿ.) ಜೋಡುರಸ್ತೆ, ಕಾರ್ಕಳ ಇದರ ಅಜೆಕಾರು ಶಾಖೆಯ ಉದ್ಘಾಟನಾ ಸಮಾರಂಭ ನಾಳೆ (ಆಗಸ್ಟ್.20) ಬೆಳಗ್ಗೆ 10 ಗಂಟೆಗೆ ಅಜೆಕಾರು ಮುಖ್ಯಪೇಟೆಯ ವಿಜಯಶ್ರೀ ಬಿಲ್ಡಿಂಗ್‌ನಲ್ಲಿ ನಡೆಯಲಿದೆ.
ಕಟ್ಟಡ ಮಾಲೀಕರಾದ ಗೋಕುಲ್ ದಾಸ್ ಪೈ ನೂತನ ಶಾಖೆಯನ್ನು ಉದ್ಘಾಟಿಸಲಿದ್ದು, ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟರಮಣ ಭಟ್ ಆಶೀರ್ವಚನ ನೀಡಲಿದ್ದಾರೆ.

ಸಂಘದ ಅಧ್ಯಕ್ಷರಾದ ಕೃಷ್ಣ ಮೂಲ್ಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ (ನಿ.) ಉಡುಪಿ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್ ಎಚ್. ಎನ್., ಸಹಕಾರ ಸಂಘಗಳ ಉಪನಿಬಂಧಕರು ಉಡುಪಿ ಜಿಲ್ಲೆ, ಅರುಣ್ ಕುಮಾರ್ ಎಸ್. ಎ. ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ, ಜ್ಯೋತಿ ಪೂಜಾರಿ ಮಾಜಿ ಅಧ್ಯಕ್ಷರು ಮರ್ಣೆ ಗ್ರಾಮ ಪಂಚಾಯತ್ ಅಜೆಕಾರು, ಮಾಲತಿ ದಿನೇಶ್ ಕುಲಾಲ್ ಅಧ್ಯಕ್ಷರು ಕಡ್ತಲ ಗ್ರಾಮ ಪಂಚಾಯತ್, ಸತೀಶ್ ಪೂಜಾರಿ ಕುಕ್ಕುಜೆ ಅಧ್ಯಕ್ಷರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.) ಹಿರ್ಗಾನ, ಎಚ್. ದೇವಪ್ಪ ಕುಲಾಲ್ ಗೌರವಾಧ್ಯಕ್ಷರು ಕುಲಾಲ ಸಂಘ ಕಾರ್ಕಳ, ಸಂತೋಷ್ ಕುಲಾಲ್ ಅಜೆಕಾರು, ಅಶೋಕ್ ನಾಯಕ್ ಮಹಾಲಕ್ಷ್ಮೀ ಕನ್‌ಕ್ಷನ್ ಹೀರ್ಗಾನ, ಭೋಜ ಕುಲಾಲ್ ಬೇಳಂಜೆ ಅಧ್ಯಕ್ಷರು ಕುಲಾಲ ಸಂಘ ಕಾರ್ಕಳ, ಸುರೇಂದ್ರ ಕುಲಾಲ್ ವರಂಗ ಅಧ್ಯಕ್ಷರು ಕುಲಾಲ ಸಂಘ ಹೆಬ್ರಿ ಭಾಗವಹಿಸಲಿದ್ದಾರೆ ಎಂದು ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೃದಯ ಕುಲಾಲ್ ತಿಳಿಸಿದ್ದಾರೆ.


