Share this news

ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಪೇಟೆಯಲ್ಲಿ ಬೀದಿನಾಯಿಗಳ ಹಾಗೂ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಅಜೆಕಾರಿನ ಬಸ್ಸು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸುಮಾರು 50ಕ್ಕೂ ಅಧಿಕ ಬೀದಿ ನಾಯಿಗಳು ಹಾಗೂ ಹತ್ತಾರು ಬೀಡಾಡಿ ದನಗಳು ಹಾಗೂ ಹೋರಿಗಳು ಎಲ್ಲೆಂದರಲ್ಲಿ ರಸ್ತೆ ತುಂಬಾ ಮಲಗಿಕೊಂಡಿರುವುದರಿAದ ಅಪಘಾತಕ್ಕೂ ಕಾರಣವಾಗುತ್ತಿದೆ..ಸ್ಥಳೀಯ ವ್ಯಾಪಾರಿಗಳು ಬೀದಿ ನಾಯಿಗಳಿಗೆ ತಿಂಡಿ ತಿನಿಸು ಹಾಕುತ್ತಿದ್ದು ಇದನ್ನು ತಿನ್ನುವಾಗ ದಾರಿಯಲ್ಲಿ ಸಾವರ್ಚಜನಿಕರು ಓಡಾಡಿದರೆ ಅವರನ್ನು ಕಚ್ಚಲು ಬೆನ್ನಟ್ಟಿದ ಘಟನೆಯೂ ನಡೆದಿದೆ ಇನ್ನು ಕೆಲವು ಬೀದಿ ನಾಯಿಗಳು ಕಚ್ಚಾಡಿಕೊಳ್ಳುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ದಾಳಿ ನಡೆಸಿದ ಘಟನೆಗಳೂ ನಡೆದಿವೆ. ಅಲ್ಲದೇ ದ್ವಿಚಕ್ರ ವಾಹನಗಳಲ್ಲಿ ಓಡಾಡುವ ಸವಾರರಿಗೂ ಬೆನ್ನಟ್ಟಿ ಅಪಘಾತಕ್ಕೆ ಕಾರಣವಾಗುತ್ತಿದೆ. ಪ್ರಮುಖವಾಗಿ ಮುಂಜಾನೆ ಮಹಿಳೆಯರು,ವೃದ್ಧರು ಹಾಗೂ ಮಕ್ಕಳು ವಾಕಿಂಗ್ ಮಾಡುವಾಗ ಕೋಲು ಹಿಡಿದುಕೊಂಡೇ ವಾಕಿಂಗ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕ್ರಮ ಕೈಗೊಳ್ಳದ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆಯಿಲ್ಲದೇ ಅವುಗಳ ಸಂಖ್ಯೆ ಹೆಚ್ಚುತ್ತಿದ್ದು, ಮಾತ್ರವಲ್ಲದೇ ಬೀದಿನಾಯಿಗಳಿಗೆ ರೇಬಿಸ್ ಖಾಯಿಲೆ ಹರಡಿದರೆ ಇದರಿಂದ ಸಾರ್ವಜನಿಕರಿಗೆ ಅಪಾಯ ತಪ್ಪಿದ್ದಲ್ಲ, ಇಂತಹ ಗಂಭೀರ ಸಮಸ್ಯೆಯ ವಿಚಾರದಲ್ಲಿ ತುರ್ತು ಕ್ರಮಕೈಗೊಳ್ಳಬೇಕಿದ್ದ ಮರ್ಣೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಆದ್ದರಿಂದ ತಕ್ಷಣವೇ ಮರ್ಣೆ ಗ್ರಾಮ ಪಂಚಾಯಿತಿ ಆಡಳಿತ ಬೀದಿನಾಯಿಗಳನ್ನು ಹಾಗೂ ಬೀಡಾಡಿ ದನಗಳನ್ನು ಹಿಡಿದು ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆAದು ಸ್ಥಳೀಯರು ಪಂಚಾಯಿತಿ ಆಡಳಿತವನ್ನು ಆಗ್ರಹಿಸಿದ್ದಾರೆ.

 

 

 

 

 

 

 

 

Leave a Reply

Your email address will not be published. Required fields are marked *