ಕಾರ್ಕಳ: ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡ ಘಟನೆ ಅಜೆಕಾರು ರಿಕ್ಷಾ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ.
ರಿಕ್ಷಾ ಚಾಲಕ ಪವಿತ್ರ ಕುಮಾರ್ ಜೈನ್ ಎಂಬವರು ತನ್ನ ರಿಕ್ಷಾದಲ್ಲಿ ಅಜೆಕಾರಿನಿಂದ ಗುಡ್ಡೆಯಂಗಡಿಗೆ ಬಾಡಿಗೆ ಮಾಡಿಕೊಂಡು ಮರಳಿ ನಿಲ್ದಾಣಕ್ಕೆ ಬಂದಾಗ ಇನ್ನೋರ್ವ ಚಾಲಕ ಸುಕೇಶ್ ಎಂಬವರು ಪವಿತ್ರ ಕುಮಾರ್ ಅವರನ್ನು ತಡೆದು ಕ್ಯೂ ತಪ್ಪಿಸಿ ಬಾಡಿಗೆ ಮಾಡಿದ್ದು ಯಾಕೆ ಎಂದು ಆಕ್ಷೇಪಿಸಿದಾಗ ಪವಿತ್ರ ಕುಮಾರ್ ಸುಕೇಶ್ ಅವರನ್ನು ತಳ್ಳಿದಾಗ ಸುಕೇಶ್ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪವಿತ್ರ ಕುಮಾರ್ ಜೈನ್ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಿಕ್ಷಾ ಚಾಲಕ ಮಾಲಕರ ಸಂಘದ ನಿಯಮಾವಳಿ ಪ್ರಕಾರ ಸರತಿ ಸಾಲಿನಂತೆ ಬಾಡಿಗೆ ಮಾಡಬೇಕೆಂಬ ನಿಯಮವಿದೆ. ಆದರೆ ಪವಿತ್ರ ಕುಮಾರ್ ಸರತಿ ಸಾಲನ್ನು ತಪ್ಪಿಸಿ ಬಾಡಿಗೆ ಮಾಡಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಎನ್ನಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ