ಕಾರ್ಕಳ: ಬೈಕ್ ಹಾಗೂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಕೊಂಬಗುಡ್ಡೆ ಎಂಬಲ್ಲಿ ಜೂನ್ 28ರಂದು ಬುಧವಾರ ಸಂಜೆ ನಡೆದಿದೆ.
ಹೆರ್ಮುಂಡೆ ನಿವಾಸಿ ಭಾಸ್ಕರ ಎಂಬವರು ತನ್ನ ಗೂಡ್ಸ್ ರಿಕ್ಷಾದಲ್ಲಿ ಮೀನು ಲೈನ್ ಸೇಲ್ ಮಾಡಿಕೊಂಡು ಅಜೆಕಾರಿನತ್ತ ಬರುತ್ತಿದ್ದಾಗ ಕೊಂಬಗುಡ್ಡೆ ಎಂಬಲ್ಲಿ ಏಕಾಎಕಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ರಿಕ್ಷಾ ರಸ್ತೆಯ ಬಲಭಾಗಕ್ಕೆ ತಿರುಗಿದ ಪರಿಣಾಮ ಬೈಕಿನ ಸಹಸವಾರ ಹೆರ್ಮುಂಡೆಯ ವಿಶ್ವನಾಥ ಹಾಗೂ ಬೈಕ್ ಸವಾರ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಜಖಂಗೊAಡಿದ್ದು ಸವಾರರು ಧರಿಸಿದ್ದ ಹೆಲ್ಮೆಟ್ ಪುಡಿಯಾಗಿದೆ.ರಿಕ್ಷಾ ಚಾಲಕ ಭಾಸ್ಕರ ಎಂಬವರ ಅತೀವೇಗ ಹಾಗೂ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ