Share this news

ದಾವಣಗೆರೆ : ನನ್ನ ತಲೆ ಕೆಟ್ಟು ಚೆಕ್ ಬೌನ್ಸ್ ಆಗಿಲ್ಲ. ನಾನು ಸಮಾಜದ ಯಾವುದೇ ಜಾಗವನ್ನೂ ಕಬಳಿಸಿಲ್ಲ ಎಂದು ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕೆಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತಲೆ ಕೆಟ್ಟಿದೆಯೋ ಅಥವಾ ಶಿಕ್ಷಣ ಸಚಿವ ಮಧು ಬಂಗಾರಪ್ಪನಿಗೆ ತಲೆ ಕಟ್ಟಿದೆಯೋ ಎನ್ನುವುದು ಜನರಿಗೆ ಗೊತ್ತಿದೆ ಎಂದು ಮಧು ಬಂಗಾರಪ್ಪ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಓರ್ವ ಶಿಕ್ಷಣ ಸಚಿವನಾಗಿ ಮಧು ಬಂಗಾರಪ್ಪ ಬಾಯಿಗೆ ಬಂದಂತೆ ಮಾತನಾಡಬಾರದು,ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ತಕ್ಷಣವೇ ಮಧು ಬಂಗಾರಪ್ಪನನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಮಧು ಬಂಗಾರಪ್ಪ ಅಸಂಸ್ಕೃತ, ಅವಿದ್ಯಾವಂತ ಸಚಿವ ಎಂದು ಕಿಡಿಕಾರಿದರು. ಮುಂದಿನ ದಿನಗಳಲ್ಲಿ ಸಚಿವ ಮಧು ಬಂಗಾರಪ್ಪ ಭ್ರಷ್ಟಾಚಾರ ತೆರೆದಿಡುವ ಕೆಲಸ ಮಾಡುತ್ತೇನೆ. ಸದ್ಯದಲ್ಲೇ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧು ಬಂಗಾರಪ್ಪ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ಸಚಿವ ಸಂಪುಟದಲ್ಲಿಯೇ ದುರಂಹಕಾರಿ ಮಂತ್ರಿಯೆಂದರೆ ಅದು ಮಧು ಬಂಗಾರಪ್ಪ. ಸ್ವಾಮೀಜಿಗಳು, ಜನರಿಗೆ ಮರ್ಯಾದೆಯನ್ನೂ ಕೊಡದ ವ್ಯಕ್ತಿ ಮಂತ್ರಿಯಾಗಿದ್ದೂ ವ್ಯರ್ಥ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಿಂದ ಮಧು ಬಂಗಾರಪ್ಪಗೆ ಕೈಬಿಟ್ಟು, ಈಡಿಗ ಸಮುದಾಯದ ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡಲಿ. ಐವರು ಸಚಿವರ ಬಳಿ ಮಧು ಬಂಗಾರರಪ್ಪ ಹಣ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾವೇಶಕ್ಕಾಗಿ ಹೀಗೆ ಹಣ ಪಡೆಯಲಾಗಿದೆ ಎಂದು ಆರೋಪಿಸಿದರು. ಒಂದು ವೇಳೆ ನನ್ನ ಆರೋಪ ನಿರಾಕರಿಸುವುದಾದರೆ ಧರ್ಮಸ್ಥಳಕ್ಕೆ ಬಂದು, ಗಂಟೆ ಭಾರಿಸಿ ಹಣ ಪಡೆದಿಲ್ಲವೆಂದು ಮಧು ಬಂಗಾರಪ್ಪ ಹೇಳಲಿ. ಅವರು ಹಣ ಪಡೆದ ಬಗ್ಗೆ ನಾನು ಗಂಟೆ ಹೊಡೆದು ಹೇಳುತ್ತೇನೆ ಎಂದು ಸವಾಲು ಹಾಕಿದರು.

ಈಡಿಗ ಸಮಾಜಕ್ಕೆ ಮಧು ಬಂಗಾರಪ್ಪ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಅವರು, ಇಂತಹ ದುರಹಂಕಾರಿ ವ್ಯಕ್ತಿಯು ಸಂವಿಧಾನಕ್ಕೆ ಅಗೌರವ ತೋರಿಸುತ್ತಿದ್ದಾರೆ. ಜ.6ರಂದು ದೆಹಲಿಗೆ ಹೋಗಲಿದ್ದೇನೆ. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಮುಖಂಡ ರಾಹುಲ್ ಗಾಂಧಿಗೆ ದಾಖಲೆ ಸಮೇತ ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತೇನೆ ಎಂದು ಎಚ್ಚರಿಸಿದರು.
ಗೀತಾ ಸ್ಪರ್ಧಿಸಿದರೆ ಈಡಿಗ ಸಮಾಜದ ಗಣ್ಯರು ಕಣಕ್ಕೆ: ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜಕುಮಾರ ಕುಟುಂಬ ಒಂದು ಪಕ್ಷಕ್ಕೆ ಎಂದಿಗೂ ಸೀಮಿತವಾಗಿರಲಿಲ್ಲ. ಆದರೆ, ಮೊನ್ನೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್ ಭಾಗವಹಿಸಿದ್ದಾರೆ ಎಂದು ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ ಬೇಸರ ಹೊರ ಹಾಕಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಆಫರ್ ನೀಡಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ ನಿಲ್ಲಿಸಲು ಕಾಂಗ್ರೆಸ್ಸಿನ ನಾಯಕರು ತೀರ್ಮಾನಿಸಿದ್ದರು. ಶಿವಮೊಗ್ಗದಲ್ಲಿ ಅವರು ಸ್ಪರ್ಧಿಸಿದ್ದಲ್ಲಿ ಅವರ ವಿರುದ್ಧ ನಾನೂ ಸೇರಿ ಈಡಿಗ ಸಮುದಾಯದ ಅನೇಕ ಗಣ್ಯರು ಸ್ಪರ್ಧಿಸಲಿದ್ದೇನೆ ಎಂದು ಸವಾಲು ಹಾಕಿದರು.

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *