Share this news

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಚರ್ಚ್ ವಿರುದ್ಧ ಮತ್ತೊಮ್ಮೆ ಭೂ ಅತಿಕ್ರಮಣದ ಆರೋಪ ಕೇಳಿಬಂದಿದೆ.
ಚರ್ಚ್ ಮುಂಭಾಗದಲ್ಲಿ ನಡೆಯುತ್ತಿರುವ ಪ್ರಾಂಗಣದ ವಿಸ್ತರಣೆಯ ಕೆಲಸಕ್ಕೆ ಹಿಂದೂ ಜಾಗರಣ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಸ್ಥಳವು ಸರಕಾರಿ ಜಾಗವಾಗಿದ್ದು, ಕಳೆದ ಹಲವು ದಶಕಗಳಿಂದ ಚರ್ಚ್ ಇದೇ ರೀತಿ ಸರಕಾರಿ ಜಾಗವನ್ನು ಒತ್ತುವರಿ ಮಾಡುತ್ತಾ ಬಂದಿದೆ. ಕಂದಾಯ ಅಧಿಕಾರಿಗಳು ತಕ್ಷಣವೇ ಚರ್ಚ್ ನ ಸುತ್ತಮುತ್ತಲಿನ ಸ್ಥಳದಲ್ಲಿ ಗಡಿ ಗುರುತನ್ನು ಮಾಡಿ ಸರಕಾರದ ಜಾಗವನ್ನು ಸಂರಕ್ಷಿಸಬೇಕು ಇಲ್ಲದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಇರುವ ಕಾರ್ಯಕರ್ತರನ್ನು ಕೂಡಿಕೊಂಡು ತೀವ್ರವಾದ ಹೋರಾಟ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಈ‌ ಕುರಿತು ಬುಧವಾರ ಕಾರ್ಕಳ ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಅವರನ್ನು ಭೇಟಿಯಾದ ಹಿಂದೂ ಜಾಗರಣ ವೇದಿಕೆಯು ಒತ್ತುವರಿಗೆ ಮನವಿ ಮಾಡಿದೆ. ನಾವು ಚರ್ಚ್ ನಡೆಸುವ ಜಾತ್ರೋತ್ಸವಕ್ಕೆ ಯಾವುದೇ ಅಡ್ಡಿಯನ್ನು ಮಾಡುವುದಿಲ್ಲ ಆದರೆ ಮುಂದಿನ ಎರಡು ವಾರದ ಒಳಗೆ ಆಕ್ರಮಿತ ಸರಕಾರಿ ಜಾಗಗಳಲ್ಲಿ ಗಡಿ ಗುರುತು ಮಾಡದೇ ಇದ್ದಲ್ಲಿ ಕಾರ್ಕಳ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಕಳೆದ ಮೂರು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಅತ್ತೂರು ಸಂತಲಾರೆನ್ಸ್ ಚರ್ಚ್ ನಡೆಸಿದೆ ಎನ್ನಲಾದ ಭೂ ಅತಿಕ್ರಮಣಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಬಂದಿದೆ.ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ಗುರುಪ್ರಸಾದ್ ನಾರಾವಿ, ಶ್ರೀಕಾಂತ್ ಶೆಟ್ಟಿ, ಪ್ರಶಾಂತ ನಾಯಕ್ ,ಸತ್ಯೇಂದ್ರ ಭಟ್ ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಷ್ ಹೆಗ್ಡೆ, ರಮೇಶ್ ಶೆಟ್ಟಿ ತೆಳ್ಳಾರ್, ರಮೇಶ್ ಕಲ್ಲೊಟ್ಟೆ, ಸಂತೋಷ್ ಕುಕ್ಕದಕಟ್ಟೆ, ರಾಘವೇಂದ್ರ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *