ಬೆಂಗಳೂರು: 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಆಕಸ್ಮಿಕ ಮರಣದ ಪರಿಹಾರಧನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಕಸ್ಮಿಕ ಮರಣ ಹೊಂದಿದ ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ.5,000/-ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ಗರಿಷ್ಟ ರೂ.10,000/-ದಂತೆ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ.
ಜಾನುವಾರು ಮಾಲೀಕರು ಯೋಜನೆಯ ಸದುಪಯೋಗ ಪಡೆಯಲು ಮೃತಪಟ್ಟ ಜಾನುವಾರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಿಸಿದ ನಂತರವೇ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.














