Share this news

ಚೆನ್ನೈ: ಸೋಮವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಭಾರತದ ಧ್ವಜಗಳನ್ನು ತಂದಿದ್ದ ಕ್ರೀಡಾಭಿಮಾನಿಗಳನ್ನು ಪೊಲೀಸ್​ ಅಧಿಕಾರಿಯೊಬ್ಬ ತಡೆದು ಧ್ವಜವನ್ನು ಕಿತ್ತುಕೊಂಡ
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ದುರ್ವರ್ತನೆಗೆ ದೇಶದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಭಾರತ ಧ್ವಜಕ್ಕೆ ಅವಮಾನಿಸಿದ ಪೊಲೀಸ್ ಅಧಿಕಾರಿ ಪಾಕಿಸ್ತಾನದ ಏಜೆಂಟರಂತೆ ವರ್ತಿಸಿದ್ದು ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕ್ರೀಡಾಭಿಮಾನಿಗಳು ಆಗ್ರಹಿಸಿದ್ದಾರೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಭಾರತದ ಧ್ವಜವನ್ನು ಹಿಡಿದು ಪಂದ್ಯವನ್ನು ವೀಕ್ಷಿಸಲು ಬಂದ ಕ್ರೀಡಾಭಿಮಾನಿಗಳನ್ನು ತಡೆಯುವ ಪೊಲೀಸ್​ ಅಧಿಕಾರಿ ಧ್ವಜವನ್ನು ಹಿಡಿದುಕೊಂಡು ಒಳಗೆ ಹೋಗದಂತೆ ತಾಕೀತು ಮಾಡುತ್ತಾರೆ, ಇದನ್ನು ಪ್ರಶ್ನಿಸಿದ ಕ್ರೀಡಾಭಿಮಾನಿಯಿಂದ ಧ್ವಜ ಕಿತ್ತುಕೊಂಡ ಪೊಲೀಸ್ ಅಧಿಕಾರಿ ಭಾರತದ ಧ್ವಜಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ‌ ಬಳಿಕ ಎಚ್ಚೆತ್ತ ಅಧಿಕಾರಿಯು ಕಸದ ಬುಟ್ಟಿಗೆ ಹಾಕಿದ್ದ ಬಾವುಟಗಳನ್ನು ಹೊರತೆಗೆದಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ಆಡಳಿತರೂಢ ಡಿಎಂಕೆ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ವಿಸ್ತೃತ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರತದ ಬಾವುಟಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಭಂಧಿಸಿಲ್ಲ.ಈ ಘಟನೆ ಕುರಿತು ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

 

 

 

 

 

 

Leave a Reply

Your email address will not be published. Required fields are marked *