ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಒಂದೊAದೇ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟುತ್ತಿದೆ. ಇದರ ನಡುವೆ ರಾಜ್ಯ ಸರಕಾರ ಜುಲೈ ತಿಂಗಳಲ್ಲಿ ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಈ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಿತ್ತು. ಆದರೆ ಭಾರತೀಯ ಮದ್ಯ(ಐಎಂಎಲ್) ಮಾರಾಟ ಪ್ರಮಾಣ ಶೇ.15ರಷ್ಟು ಕುಸಿದಿದ್ದು, ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ.
ಅಬಕಾರಿ ಸುಂಕ ಹೆಚ್ಚಳವಾಗುತ್ತಿದ್ದಂತೆ ಬಾರ್, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದೆ. ಹೀಗಾಗಿ ರಾಜ್ಯ ಪಾನೀಯ ನಿಗಮಕ್ಕೆ ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಅಂಕಿ-ಅAಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್ ಶೇ.5ರಷ್ಟು ಕುಸಿದಿದೆ. ಇದಿರಂದ ಸರ್ಕಾರದ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಏಪ್ರಿಲ್ -2308 ಕೋಟಿ, ಮೇ -2607 ಕೋಟಿ, ಜೂನ್-3549 ಕೋಟಿ, ಜುಲೈ-2980 ಕೋಟಿ ರೂ. ಇದ್ದ ಆದಾಯ ಆಗಸ್ಟ್ ತಿಂಗಳಲ್ಲಿ (ಆ.14ವರೆಗೆ) ಕೇವಲ 962 ಕೋಟಿ ರೂ. ಸಂಗ್ರಹವಾಗಿದೆ.
ಐಎAಎಲ್ ಮೇಲೆ ಶೇ.20 ರಷ್ಟು ಸುಂಕ ಹೆಚ್ಚಳ ಪರಿಣಾಮ ಎಲ್ಲಾ 18 ಸ್ಲಾಬ್‌ಗಳ ಲಿಕ್ಕರ್ ದರ ಏರಿಕೆಯಾಗಿದೆ. ಪ್ರತಿ ಪೆಗ್‌ಗೆ 10 ರಿಂದ 20 ರೂ. ಏರಿಕೆಯಾಗಿದ್ದು ಪ್ರತಿ ಬಾಟಲ್‌ಗೆ 50 ರಿಂದ 200 ರೂ.ಏರಿಕೆಯಾಗಿದೆ. ಪ್ರತಿ ತಿಂಗಳು ಸರಾಸರಿ 61 ಲಕ್ಷ ಟನ್ ಬಾಕ್ಸ್ ಮಾರಾಟವಾಗ್ತಿತ್ತು. ಆಗಸ್ಟ್ನಲ್ಲಿ 18.8 ಲಕ್ಷ ಟನ್ ಬಾಕ್ಸ್ ಮಾತ್ರ ಮಾರಾಟವಾಗಿದೆ.
ಅಬಕಾರಿ ಸುಂಕ ಹೆಚ್ಚಳ ಪರಿಣಾಮ ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಲೇಬಲ್ ಇರುವ ಹೆಚ್ಚು ಬೆಲೆಯ ನಕಲಿ ಮದ್ಯ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲದೆ ಮಿಲಿಟರಿ ಕ್ಯಾಂಟೀನ್ ಮತ್ತು ಡ್ಯೂಟಿ ಫ್ರೀ ಹೆಸರಿನಲ್ಲಿ ಹೆಚ್ಚು ಬೆಲೆಯ ನಕಲಿ ಮದ್ಯ ಮಾರುಕಟ್ಟೆಗೆ ಬರುತ್ತಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.