ಕಾರ್ಕಳ:ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ದೇಶದ ಎಲ್ಲಾ ದೇಗುಲ ಮತ್ತು ತೀರ್ಥ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಪ್ರಯುಕ್ತ ಹಾಗೂ ಕಾರ್ಕಳದಲ್ಲಿ ನಡೆಯುತ್ತಿರುವ ಐತಿಹಾಸಿಕ ಆನೆಕೆರೆ ಚತುರ್ಮುಖ ಬಸದಿ ಹಾಗೂ ಜೈನ ಮಠದ ಜೀರ್ಣೋದ್ಧಾರದ ಅಂಗವಾಗಿ ಭಾನುವಾರ ಸ್ವಚ್ಚ ಕಾರ್ಕಳ ಬಿಗ್ರೇಡ್ ತಂಡದ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಾರ್ಕಳ ನಾಗರಭಾವಿ-ಗೋಮಟೇಶ್ವರ ಬೆಟ್ಟದಿಂದ – ದಾನಶಾಲೆ – ಆನೆಕೆರೆಯ ವರೆಗೆ ಮಹಾ ಸ್ವಚ್ಚತಾ ಅಭಿಯಾನ ನಡೆಯಿತು.
ಮಹಾ ಸ್ವಚ್ಚಥಾ ಅಭಿಯಾನದಲ್ಲಿ ಯಕ್ಷಬ್ರಹ್ಮ ಕ್ರಿಕೆಟರ್ಸ್ ನೆಲ್ಲಿಕಾರು, ಗೆಳೆಯರ ಬಳಗ ಚೆಂಡೆ, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿ ಹಾಗು ಅಧ್ಯಾಪಕರ ತಂಡ, ಕಾರ್ಕಳ ಜೈನ ಬ್ರಿಗೇಡ್, ಸ್ವಚ್ಛ ಬಜಗೋಳಿ ಬ್ರಿಗೇಡ್, ಶ್ರೀ ಬುಜಬಲಿ ಆಶ್ರಮದ ವಿದ್ಯಾರ್ಥಿ ಹಾಗು ಸಿಬಂದಿ ತಂಡ, ಶ್ರವಿಕಾ ಆಶ್ರಮದ ವಿದ್ಯಾರ್ಥಿನಿಯರ ಹಾಗೂ ವ್ಯವಸ್ಥಾಪಕರು ಮತ್ತು ದಾನಶಾಲೆಯ ವಠಾದ ಹತ್ತಾರು ಮನೆಯ ನಿವಾಸಿಗಳು ಸೇರಿ ಸುಮಾರು ೨೦೦ ಜನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಸುಮಾರು 5 ಕಿ.ಮೀ ಮಾರ್ಗಗಳ ಬದಿಯಲ್ಲಿನ ಕಸದ ರಾಶಿ ಹಾಗೂ ಶ್ರೀಗೋಮಟೇಶ್ವರ ಬೆಟ್ಟದ ಮೇಲೆ ಎಸೆದಿದ್ದ ತ್ಯಾಜಗಳನ್ನು ಸಂಗ್ರಹಿಸಿ ಸುಮಾರು 100 ಗೋಣಿ ಕಸವನ್ನು ವಿಲೇವಾರಿ ಮಾಡಲಾಯಿತು.
ಈ ಸ್ವಚ್ಛತಾ ಅಭಿಯಾನದಲ್ಲಿ ಕಾರ್ಕಳದ ಮಾನ್ಯ ಶಾಸಕ ಶ್ರೀ ವಿ ಸುನಿಲ್ ಕುಮಾರ್ ಭಾಗವಹಿಸಿ, ಸ್ವಯಂಸೇವಕರನ್ನು ಪ್ರೋತ್ಸಾಹಿಸಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಕಾರ್ಯವನ್ನು
ಶ್ಲಾಘಿಸಿದರು, ಅವರಿಗೆ ಹಾಗೂ ಸಹಕಾರ ನೀಡಿದ ಎಲ್ಲಾ ತಂಡಗಳಿಗೆ, ಈ ಮಹಾ ಸ್ವಚ್ಛತಾ ಆಭಿಯಾನದ ಆಯೋಜಕರಾದ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಎಂ.ಕೆ ವಿಪುಲ್ ಮತ್ತು ನಿರಂಜನ್ ಜೈನ್ ಅವರು ಕೃತಜ್ಞತೆ ಸಲ್ಲಿಸಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ