ಅಯೋಧ್ಯೆ : ಅಯೋಧ್ಯೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಶೃಂಗಾರ್ ಹಾತ್ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಅಂಗಡಿಯಲ್ಲಿ ಅನುಮಾನಾಸ್ಪದವಾಗಿ ಸ್ಫೋಟ ಸಂಭವಿಸಿದೆ.
ಈ ಸ್ಫೋಟದಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಎಂಬ ಕಾರ್ಮಿಕನ ಕೈ ಕರಕಲಾಗಿದ್ದು, ಆತನ ಹೊಟ್ಟೆಗೂ ಗಾಯವಾಗಿದೆ. ಸಧ‍್ಯ ಗಂಭೀರ ಸ್ಥಿತಿಯಲ್ಲಿರುವ ಕಾರ್ಮಿಕನನ್ನ ಶ್ರೀರಾಮ್ ಆಸ್ಪತ್ರೆಯಿಂದ ಟ್ರಾಮಾ ಸೆಂಟರ್ ದರ್ಶನ್ನಗರಕ್ಕೆ ಕಳುಹಿಸಲಾಗಿದೆ.
ಪ್ರದೇಶದಲ್ಲಿ ತೀಕ್ಷ್ಣವಾದ ಸ್ಫೋಟದಿಂದಾಗಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಅಂಗಡಿಯ ಮಾಲೀಕರು ಪಟಾಕಿಗಳಿಂದ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದರಾದ್ರು, ಪೊಲೀಸರು ಸಮಗ್ರ ತನಿಖೆಯನ್ನ ಪ್ರಾರಂಭಿಸಿದ್ದಾರೆ.