Share this news

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನ ದಾಖಲೆ 15 ನೇ ಬಜೆಟನ್ನು ಕೇವಲ ತಮ್ಮ ಚುನಾವಣಾ ವೋಟ್ ಬ್ಯಾಂಕ್ ಓಲೈಕೆಗಾಗಿ ಮೀಸಲಿಟ್ಟಿದ್ದು, ಅಲ್ಪ ಸಂಖ್ಯಾತ ಸಮುದಾಯಕ್ಕೆ”ಮಿತಿ ಮೀರಿದ ಓಲೈಕೆಯ ಸಿದ್ದು ಬಜೆಟ್ ಇದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತ ಸಮುದಾಯಕ್ಕೆ ನೀಡಿರುವ ಅನೇಕ ವಿಶೇಷ ಯೋಜನೆಗಳು ಮಾನ್ಯ ಮುಖ್ಯಮಂತ್ರಿಗಳು ಬಹುಸಂಖ್ಯಾತ ಸಮುದಾಯವನ್ನು ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿಗಳು ತನ್ನ ಆರ್ಥಿಕ ನೀತಿಗಳ ವಿಫಲತೆಗಳನ್ನು ಮುಚ್ಚಿಟ್ಟು ಇಂದಿನ ಆರ್ಥಿಕ ಪರಿಸ್ಥಿತಿಯ ದುಸ್ಥಿತಿಗೆ ಕೇಂದ್ರವನ್ನು ದೂರುವುದಕ್ಕಾಗಿ ತನ್ನ ಬಜೆಟ್ ಭಾಷಣವನ್ನು ಉಪಯೋಗಿಸಿರುವುದು ದುರಂತ. ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗುವ ನಿಯಮಗಳು ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರದಂತೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎನ್ನುವ ಕನಿಷ್ಠ ಜ್ಞಾನವಾದರೂ ಇದ್ದಿದ್ದರೆ ಈ ಬೇಜವಾಬ್ದಾರಿಯ ಹೇಳಿಕೆ ಬಜೆಟ್ ಭಾಷಣದ ಭಾಗವಾಗುತ್ತಿರಲಿಲ್ಲ.
ಒಂದೆಡೆ ಕೇಂದ್ರವನ್ನು ದೂಷಿಸುತ್ತಾ, ತನ್ನ ಬಜೆಟ್ ನ ಅನುದಾನಗಳ ಪೂರೈಕೆಗೆ ಕೇಂದ್ರದ ಮೊರೆ ಹೋಗುವುದು ಆರ್ಥಿಕ ಸೋಗಲಾಡಿತನಕ್ಕೆ ‘ಸಿದ್ದು ಮಾದರಿ ಬಜೆಟ್’ ಎನ್ನಬಹುದು ಎಂದು ಕಾರ್ಣಿಕ್ ಲೇವಡಿ ಮಾಡಿದ್ದಾರೆ.
ಕೇಂದ್ರದ ಯೋಜನೆಗಳನ್ನು ತನ್ನ ಯೋಜನೆಗಳೆಂದು ಬಿಂಬಿಸುವ ವ್ಯರ್ಥ ಪ್ರಯತ್ನ ಈ ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ.ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಮಿತಿಮೀರಿದ ಸಾಲದ ಮೊರೆ ಹೋಗಿರುವುದು ಮುಂಬರುವ ದಿನಗಳಲ್ಲಿ ಆರ್ಥಿಕ ವಿಪತ್ತುಗಳಿಗಷ್ಟೇ ಗ್ಯಾರಂಟಿ ಎನ್ನಿಸುವ ಬಜೆಟ್ ಇದಾಗಿದೆ

ಮೀನುಗಾರರಿಗೆ ಮನೆ, ಹೊಸ ಬಂದರುಗಳು, ಕ್ರಾಪ್ ಲೋನ್, ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ಮಿತಿ ಹೆಚ್ಚಳ, ಕೇಂದ್ರದ ಕೆಲವು ಯೋಜನೆಗಳ ಅನುಷ್ಠನಕ್ಕಾಗಿ ಉಪಕ್ರಮಗಳು ಸ್ವಾಗತಾರ್ಹವಾಗಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ರಾಜ್ಯದ ಎಲ್ಲಾ ಜನರ ಹಿತದೃಷ್ಟಿಯಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಕೇಂದ್ರದೊಂದಿಗೆ ರಾಜಕೀಯ ಕಾರಣಗಳಿಗೆ ನಡೆಸುವ ಸಂಘರ್ಷ ರಾಜ್ಯದ ಅಭಿವೃದ್ದಿಗೆ ಮಾರಕ ಎನ್ನುವ ಅಂಶವನ್ನು ಈ ಬಜೆಟ್ ಕಡೆಗಣಿಸಿದಂತಿದೆ.

ಮುಖ್ಯಮಂತ್ರಿಗಳು ತನ್ನ ಆರ್ಥಿಕ ನೀತಿಗಳ ವಿಫಲತೆಗೆಳನ್ನು ಮುಚ್ಚಿಟ್ಟು ಇಂದಿನ ಆರ್ಥಿಕ ಪರಿಸ್ಥಿತಿಯ ದುಸ್ಥಿತಿಗೆ ಕೇಂದ್ರವನ್ನು ದೂರುವುದಕ್ಕಾಗಿ ತನ್ನ ಬಜೆಟ್ ಭಾಷಣವನ್ನು ಉಪಯೋಗಿಸಿರುವುದು ದುರಂತ. ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗುವ ನಿಯಮಗಳು ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರದಂತೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎನ್ನುವ ಕನಿಷ್ಠ ಜ್ಞಾನವಾದರೂ ಇದ್ದಿದ್ದರೆ ಈ ಬೇಜವಾಬ್ದಾರಿಯ ಹೇಳಿಕೆ ಬಜೆಟ್ ಭಾಷಣದ ಭಾಗವಾಗುತ್ತಿರಲಿಲ್ಲ.
ಒಟ್ಟಿನಲ್ಲಿ ಈ ಬಜೆಟ್ ಕೇಂದ್ರವನ್ನೂ ದೂರುತ್ತಾ ಕೇಂದ್ರದ ಅನುದಾನಗಳನ್ನು ಉಪಯೋಗಿಸಿ, ಕೇಂದ್ರದ ಯೋಜನೆಗಳನ್ನು ತನ್ನದಾಗಿಸಿ ರಾಜಕೀಯ ಲಾಭ ಗಿಟ್ಟಿಸುವ ಮಾನ್ಯ ಮುಖ್ಯಮಂತ್ರಿಗಳ ಸಂಕುಚಿತ ಮನೋಭಾವವನ್ನು ವ್ಯಕ್ತಪಡಿಸುವ ಬಜೆಟ್ ಆಗಿರುವುದು ದುರಂತ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ

 

 

Leave a Reply

Your email address will not be published. Required fields are marked *