Share this news

ಮೂಡಬಿದಿರೆ: ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್ (ರಿ) ಮೂಡಬಿದಿರೆ ಆಶ್ರಯದಲ್ಲಿ ಯೋಗಶ್ರೀ ಯೋಗ ಬಳಗ ಮಂಗಳೂರು ಸಹಯೋಗದಲ್ಲಿ 34ನೇ ವರ್ಷದ ಮೂಡಬಿದಿರೆ ಶ್ರೀ ಶಾರದೋತ್ಸವ ಪ್ರಯುಕ್ತ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯು ಅಕ್ಟೋಬರ್ 20ರಂದು ಮೂಡಬಿದಿರೆ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.

ಕಿರಿಯ ಪ್ರಾಥಮಿಕ,ಹಿರಿಯ ಪ್ರಾಥಮಿಕ, ಪ್ರೌಢಶಾಲಾ,ಕಾಲೇಜು ವಿಭಾಗ ಮತ್ತು 25 ವರ್ಷದ ಒಳಗಿನವರು, 35 ವರ್ಷ ಒಳಗಿನವರು,50 ವರ್ಷದ ಒಳಗಿನವರು ಹಾಗೂ 50 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಬಾಲಕ ಬಾಲಕಿಯರಿಗೆ ಮತ್ತು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳಿಸಿದ ವಿಜೇತ ಪುರುಷರಿಗೆ ಯೋಗ ವಿಶಾರದ ಮತ್ತು ಮಹಿಳೆಯರಿಗೆ ಯೋಗ ಶಾರದೆ ಚಾಂಪಿಯನ್ ಆಫ್ ಚಾಂಪಿಯನ್ ಸ್ಪರ್ಧೆ ನಡೆಸಿ ಗೌರವಿಸಲಾಗುವುದು.

ಆಸಕ್ತರು ಅಕ್ಟೋಬರ್ 15ರ ಒಳಗೆ ಗೂಗಲ್ ಲಿಂಕ್ ಮೂಲಕ ಹೆಸರು ನೊಂದಾಯಿಸಬಹುದು ಎಂದು ರಾಜ್ಯ ಯೋಗ ಸಂಘಟಕರಾದ ಶೇಖರ್ ಕಡ್ತಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9480487081 ಅನ್ನು ಸಂಪರ್ಕಿಸಬಹುದು

 

 

 

 

 

 

 

 

 

Leave a Reply

Your email address will not be published. Required fields are marked *