ಕಾರ್ಕಳ: ಒಬ್ಬರು ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಹಾಲಿ ರಾಜ್ಯಪಾಲ ಇನ್ನೊಬ್ಬರು ಕಾರ್ಕಳದ ನ್ಯಾಯಾಲಯದಲ್ಲಿ ಹಿರಿಯ ವಕೀಲರು, ಇವರಿಬ್ಬರ ನಡುವಿನ ಸಂಬAಧವೆAದರೆ ಅದು ಗುರು-ಶಿಷ್ಯರ ಸಂಬAಧ. ಶಿಷ್ಯ ತಾನೆಷ್ಟು ಎತ್ತರಕ್ಕೆ ಬೆಳದರೂ ಅದಕ್ಕೆ ಪ್ರೇರಣೆ ಗುರುವೇ ಎನ್ನುವುದನ್ನು ಶಿಷ್ಯ ಎಂದಿಗೂ ಮರೆಯಲ್ಲಿಲ್ಲ. ಹುಟ್ಟೂರಿಗೆ ಬಂದಾಗಲೆಲ್ಲ ಗುರುವನ್ನು ಭೇಟಿಯಾಗದೇ ಹೋಗುತ್ತಿರಲ್ಲಿಲ್ಲ ಈ ಶಿಷ್ಯ. ಅಂದಹಾಗೆ ನಾವು ಹೇಳಹೊರಟಿರುವುದು ಸಾಮಾನ್ಯ ಗುರು-ಶಿಷ್ಯರ ವಿಚಾರವಲ್ಲ, ಬದಲಾಗಿ ನ್ಯಾಯಾಂಗ ಇಲಾಖೆಯ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಆಂದ್ರಪ್ರದೇಶದ ನಿಯೋಜಿತ ರಾಜ್ಯಪಾಲರಾಗಿರುವ ಮೂಡಬಿದಿರೆ ಅಲಂಗಾರಿನ ಅಬ್ದುಲ್ ನಝೀರ್ ಹಾಗೂ ಕಾರ್ಕಳ ನ್ಯಾಯಾಲಯದ ಹಿರಿಯ ವಕೀಲರಾದ ಎಂಕೆ, ವಿಜಯಕುಮಾರ್ ಅವರ ಕುರಿತು.
ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ ಅಬ್ದುಲ್ ನಝೀರ್ ಅಂದು ಕಾನೂನು ಪದವಿ ಪಡೆದು ಕಾರ್ಕಳದ ಖ್ಯಾತ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಅವರ ಶಿಷ್ಯರಾಗಿ ವಕೀಲ ವೃತ್ತಿ ಆರಂಭಿಸಿ ಅವರ ಗರಡಿಯಲ್ಲೇ ಪಳಗಿದವರು. ಹಲವು ವರ್ಷಗಳ ಕಾಲ ವಕೀಲರಾಗಿ ಕೆಲಸ ನಿರ್ವಹಿಸಿ ಬಳಿಕ ನ್ಯಾಯಾಂಗ ಇಲಾಖೆಯ ಪರೀಕ್ಷೆ ಬರೆದು ನ್ಯಆಯಾಧೀಶರಾಗಿ ಬಡ್ತಿಪಡೆದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದರು ಇದೀಗ ಅವರನ್ನು ಕೇಂದ್ರ ಸರ್ಕಾರ ಆಂದ್ರದ ನೂತನ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಇಂದಿಗೂ ತನ್ನ ಗುರುವಾದ ಎಂ.ಕೆ ವಿಜಯಕುಮಾರ್ ಅವರನ್ನು ನ್ಯಾ. ಅಬ್ದುಲ್ ನಝೀರ್ ಮರೆತಿಲ್ಲ. ಸಾಧನೆಯ ಶಿಖರವೇರಲು ಗುರುವಿನ ಆಶೀರ್ವಾದ ಬೇಕೇಬೇಕು ಎನ್ನುವವರ ಸಾಲಿಗೆ ನ್ಯಾ. ಅಬ್ದುಲ್ ನಝೀರ್ ಸೇರುತ್ತಾರೆ. ಉನ್ನತ ಹುದ್ದೆಯಿದ್ದರೂ ಯಾವುದೇ ಹಮ್ಮುಬಿಮ್ಮು ಇಲ್ಲದೇ ತನ್ನ ಪತ್ನಿ ಜತೆಗೆ ಫೆ 19ರಂದು ಭಾನುವಾರ ಕಾರ್ಕಳಕ್ಕೆ ಭೇಟಿ ನೀಡಿ ಗುರುಗಳಾದ ಎಂ.ಕೆ ವಿಜಯಕುಮಾರ್ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಕೆ ವಿಜಯಕುಮಾರ್, ಅಯೋದ್ಯಾ ಪ್ರಕರಣದ ಬಗೆಹರಿಸುವಲ್ಲಿ ಅವರ ಐತಿಹಾಸಿಕ ತೀರ್ಪು, ತ್ರಿವಳಿ ತಲಾಖ್ ಪ್ರಕರಣದಲ್ಲಿ ಮುಸಲ್ಮಾನ ಮಹಿಳೆಯರ ಪರವಾದ ಚಾರಿತ್ರಿಕ ತೀರ್ಪು, ಭಾರತೀಯ ಕ್ರಿಕೆಟ್ ಮಂಡಳಿಯ ಸ್ವಾಯತ್ತತೆಯ ಬಗೆಗಿನ ತೀರ್ಪು ,ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗೆಗಿನ ಮಹತ್ವದ ತೀರ್ಪು,ತುಳುನಾಡಿನ ಕಂಬಳದ ನ್ಯಾಯಬದ್ದತೆಯನ್ನು ಎತ್ತಿಹಿಡಿದ ತೀರ್ಪು ,ಭಾರತೀಯ ನಾಗರಿಕರ ಖಾಸಗೀತನದ ಹಕ್ಕನ್ನು ಮೂಲಭೂತ ಹಕ್ಕೆಂದು ಸಾರಿದ ಚಾರಿತ್ರಿಕ ತೀರ್ಪು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅತ್ಯಂತ ನ್ಯಾಯಬದ್ಧವಾಗಿ ಹಾಗೂ ಸಂವಿಧಾನ ಬದ್ದವಾಗಿ ನಝೀರ್ ಅವರು ನೀಡಿರುವ ನೂರಾರು ತೀರ್ಪುಗಳು ಮುಂದಿನ ಹಲವು ಕಾಲ ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ದಾರಿ ದೀಪವಾಗಲಿದೆ ಎಂದರು. ಕರ್ನಾಟಕ ಹಾಗೂ ಕನ್ನಡ ಕರಾವಳಿಯ ನ್ಯಾಯಾಲಯಗಳ ಮೂಲಸೌಕರ್ಯ ಅಭಿವೃದ್ದಿ, ನೂತನ ಮತ್ತು ಅತ್ಯಂತ ಸುಸಜ್ಜಿತ ನ್ಯಾಯಾಂಗ ಕಟ್ಟಡಗಳ ನಿರ್ಮಾಣ, ವಕೀಲರ ಸಂಘಗಳ ಕಟ್ಟಡ ನಿರ್ಮಾಣ ,ಯುವ ವಕೀಲರ ಕಲ್ಯಾಣ ,ನ್ಯಾಯಾಂಗ ಸಿಬ್ಬಂದಿಗಳ ಶ್ರೇಯೋಭೀವೃದ್ದಿ ಮುಂತಾದ ಕಾರ್ಯಗಳಲ್ಲಿ ಅತ್ಯಂತ ಕಾಳಜಿ ವಹಿಸಿ ಕಾರ್ಯನಿರ್ವಸಿದ್ದನ್ನು ಎಂ ಕೆ ವಿಜಯ್ ಕುಮಾರ್ ಸ್ಮರಿಸಿ ಅಭಿನಂದಿಸಿ,ರಾಜ್ಯಪಾಲರಾಗಿಯೂ ತಾವು ನ್ಯಾಯಬದ್ದವಾಗಿ ಮತ್ತು ಸಂವಿಧಾನಬದ್ದರಾಗಿ ಕಾರ್ಯನಿರ್ವಸುತ್ತೀರಿ ಎನ್ನುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು ಅಲ್ಲದೇ ರಾಷ್ಟ್ರ ಧರ್ಮ ಪಾಲನೆ ಹಾಗೂ ಜನಕಲ್ಯಾಣ ಕಾರ್ಯಗಳಲ್ಲಿ ಸದಾ ತೊಡಗಿ ಯಶಸ್ಸನ್ನು ಸಾಧಿಸಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ನಿವ್ರತ್ತ ನ್ಯಾಯಮೂರ್ತಿ ಬಿಹಾರದ ಪೂರ್ವ ರಾಜ್ಯಪಾಲ ದಿ ರಾಮಾ ಜೋಯಸ್ ಅವರ ಬ್ರಹತ್ ಕ್ರತಿಗಳಾದ ‘ Dharma and Global ethics ‘ ಮತ್ತು Legal and constitutional history of India ‘ ಎನ್ನುವ ಪುಸ್ತಕಮಾಲಿಕೆಗಳನ್ನು ನ್ಯಾಯಮೂರ್ತಿ ಅಬ್ದುಲ್ ನಝಿರ್ ರವರಿಗೆ ನೀಡಿದರು
ಕಾರ್ಕಳ ವಕೀಲರ ಸಂಘದ ಅದ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ. ಮೂಡಬಿದಿರೆ ವಕೀಲರ ಸಂಘದ ಅದ್ಯಕ್ಷ ಎಂ ಕೆ ದಿವಿಜೇಂದ್ರ ಕುಮಾರ್, ನ್ಯಾಯವಾದಿಗಳಾದ ಎಂ ಕೆ ಸುವ್ರತ್ ಕುಮಾರ್ ,ಶ್ರೀ ಮುರಲೀದರ್ ಭಟ್, ಎಂ ಕೆ ವಿಪುಲ್ ತೇಜ್, ಪದ್ಮಪ್ರಸಾದ್ ಜೈನ್, ಶ್ವೇತಾ ವಿಪುಲ್, ಪರೀತೋಷ್,ಇತಿಹಾಸ್,ಎಂ ಕೆ ವಿದಿತ್ ಉಪಸ್ಥಿತರಿದ್ದರು.