ಹೆಬ್ರಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆದ ಅಫಘಾತಗಳಿಂದ ಜೀವಹಾನಿಯಾಗಿದ್ದು, ಈ ನಿಟ್ಟಿನಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ರಸ್ತೆಯಲ್ಲಿ ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ, ರಸ್ತೆ ತಿರುವುಗಳಲ್ಲಿ ಎಚ್ಚರಿಕೆ ಫಲಕ, ಕ್ಯಾಟ್ ಐಯ್ ಅಳವಡಿಕೆ. ತಿರುವುಗಳಲ್ಲಿ ಭಾಗಿರುವ ಮರದ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಲಹೆ ಪಡೆಯಲಾಯಿತು. ಈಗಾಗಲೇ ಪೊಲೀಸ್ ಇಲಾಖೆಯಿಂದ ಅಫಘಾತ ವಲಯ ಎಚ್ಚರಿಕೆ ಸೈನ್ ಬೋರ್ಡ್ ಗಳನ್ನು ಹಾಕಲಾಗಿದ್ದು, ಇನ್ನೂ ಹೆಚ್ಚು ಸೈನ್ ಬೋರ್ಡ್ ಗಳನ್ನು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಕಿರಿದಾದ ರಸ್ತೆ ಇರುವಲ್ಲಿ, ತಿರುವು ರಸ್ತೆ, ಅಫಘಾತ ವಲಯ ಸೈನ್ ಬೋರ್ಡ್ ಗಳನ್ನು ಕೂಡ ಹಾಕಲು ನಿರ್ಧಾರ ಕೈಗೊಳ್ಳಾಗಿದೆ.

