ಹೆಬ್ರಿ: ಹೆಬ್ರಿ ತಾಲೂಕಿನ ಸೋಮೇಶ್ವರ ಸಮೀಪದ ಆಗುಂಬೆ ಘಾಟಿಯಲ್ಲಿ ಭಾನುವಾರ ನಡೆದ ಬಸ್ -ಬೈಕ್ ಮುಖಾಮುಖಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸಹಸವಾರಿಣಿ ಯುವತಿ ನಿರ್ಮಿತಾ(19) ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಬೈಕ್ ಸವಾರ ಶಶಾಂಕ್ ಎಂಬವರು ಸ್ಥಳದಲ್ಲೇ ಮೃತಪಟ್ಟು ಸಹಸವಾರಿಣಿ ನಿರ್ಮಿತಾ ಗಂಭೀರವಾಗಿ ಗಾಯಗೊಂಡಿದ್ದರು. ಆಗುಂಬೆ ಕಡೆಯಿಂದ ಅತಿವೇಗವಾಗಿ ಬಂದ ಬೈಕ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕಿಡ್ಡಾದ ಪರಿಣಾಮ ಎದುರಿನಿಂದ ಬರುತ್ತಿದ್ದ ಬಸ್ ಗೆ ಅಪ್ಪಳಿಸಿದೆ. ಇದರಿಂದ ಬೈಕ್ ಸವಾರ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು.
ಬೈಕ್ ಸವಾರ ಅತ್ಯಂತ ವೇಗವಾಗಿ ಇಳಿಜಾರಿನಲ್ಲಿ ಬರುತ್ತಿದ್ದ ಪರಿಣಾಮ ಈ ಅಪಘಾತ ನಡೆದಿದೆ ಎನ್ನಲಾಗಿದೆ.