ಹೆಬ್ರಿ:ಆಗುಂಬೆ ಘಾಟಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.
ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿ ಶಶಾಂಕ್(21) ಮೃತಪಟ್ಟ ಬೈಕ್ ಸವಾರ ಹಾಗೂ ಸಹಸವಾರಿಣಿ ನಿರ್ಮಿತಾ(19)ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕ್ ಸವಾರ ಶಶಾಂಕ್ ಆತನ ಸಂಬಂಧಿಕಳಾದ ನಿರ್ಮಿತಾ ಜತೆ ಬೈಕ್ ನಲ್ಲಿ ಆಗುಂಬೆ ಕಡೆಯಿಂದ ಹೆಬ್ರಿ ಮೂಲಕ ಬ್ರಹ್ಮಾವರಕ್ಕೆ ತೆರಳುತ್ತಿದ್ದರು. ಬೈಕ್ ಆಗುಂಬೆ ಘಾಟಿಯ 2 ನೇ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದಾಗ ಏಕಾಎಕಿ ಸ್ಕಿಡ್ಡಾದ ಪರಿಣಾಮ ಎದುರಿನಿಂದ ಬರುತ್ತಿದ್ದ ಖಾಸಗಿ ಮಿನಿ ಬಸ್ಸಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಶಶಾಂಕ್ ಬಸ್ಸಿನಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಬೈಕ್ ಸವಾರ ಅತಿವೇಗದಲ್ಲಿ ಬಂದು ಬಸ್ ಗೆ ಅಪ್ಪಳಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗುಂಬೆ ಸಮೀಪದ ಸೋಮೇಶ್ವರ ಜಕ್ಕನಮಕ್ಕಿ ಎಂಬಲ್ಲಿ ನಿನ್ನೆಯಷ್ಟೇ ಟಿಪ್ಪರ್ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿತ್ತು.