Share this news

ಬೆಂಗಳೂರು: ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಸಿಐಡಿ (CID) ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ರಾಜೇಗೌಡ ಬಂಧಿತ ಆರೋಪಿ.  ಆರೋಪಿಯನ್ನು ಸೆರೆ ಹಿಡಿಯಲು ಸಿಐಡಿ ಎಸ್​ಪಿ ಎಂ.ಡಿ ಶರತ್ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ಆದಾಯ ತೆರಿಗೆ ಇಲಾಖೆಯ  ವೆಬ್​ಸೈಟ್​ನಲ್ಲಿನ ಲೋಪವನ್ನು ತಿಳಿದುಕೊಂಡ ಆರೋಪಿ, ಆ ಲೋಪದ ಮೂಲಕ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ರೀ ಫಂಡ್ಸ್​ ಹಣವನ್ನು​ ತನ್ನ ಖಾತೆಗೆ ಜಾಮಾ ಮಾಡಿಕೊಳ್ಳುತ್ತಿದ್ದನು. ಹೀಗೆ ಆದಾಯ ತೆರಿಗೆ ಇಲಾಖೆಗೆ ಬರೋಬ್ಬರಿ 1,41,84,360 ರೂ. ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ಟಿದವರ, ರಿಫಂಡ್ ಖಾತೆಗಳನ್ನು ಹ್ಯಾಕ್​ ಮಾಡುತ್ತಿದ್ದನು. ನಂತರ ತೆರಿಗೆದಾರರ ಹೆಸರಲ್ಲಿ ಬೇರೆ ಬ್ಯಾಂಕ್ ಖಾತೆ ತೆರೆದು ನಕಲಿ ದಾಖಲೆಗಳ ಸಹಿತ, ಕೆವೈಸಿ ಕೂಡ ಸೃಷ್ಟಿ ಮಾಡುತ್ತಿದ್ದನು. ನಂತರ ಆದಾಯ ತೆರಿಗೆ ಇಲಾಖೆ ರಿಫಂಡ್ ಮಾಡಿದ ಹಣವನ್ನು ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದನು. ಹೀಗೆ ಕೋಟಿ ಕೋಟಿ ಹಣ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.ಆರೋಪಿ ಈ ಹಿಂದೆ ಇದೇ ರೀತಿ ಮಾಡಿ 3 ಕೋಟಿ 60 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದನು. ಹಾಗೇ ಬಾಜಾಜ್ ಕಾರ್ ಲೋನ್ ಕಂಪನಿಗೆ ನಕಲಿ ದಾಖಲೆ ನೀಡಿ ಸಾಲ ಪಡೆದು ವಂಚಿಸಿದ್ದಾನೆ.

ಅಲ್ಲದೇ ಈತ ಸರ್ಕಾರದ ವೈಬ್​​ ಪೋರ್ಟಲ್​​​ಗೂ ಲಗ್ಗೆ ಇಟ್ಟಿದ್ದು, ಕರ್ನಾಟಕ ಸರ್ಕಾರದ ಕಾವೇರಿ ಆನ್ಲೈನ್ ಪೋರ್ಟಲ್​ನಲ್ಲಿ (ಆಸ್ತಿಗಳನ್ನು ರಿಜಿಸ್ಟರ್ ಮಾಡಲು ಬಳಸುವ ವೆಬ್ ಪೋರ್ಟಲ್) ಅನ್ನು ಕೂಡ ಹ್ಯಾಕ್​ ಮಾಡಲು ಯತ್ನಿಸಿದ್ದಾನೆ. ಸದ್ಯ ಅರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಹಾಸನದ ಹಿರಿಸೇವೆಯಲ್ಲಿ ಹುಟ್ಟಿ ಬೆಳೆದಿದ್ದ ದಿಲೀಪ್ ರಾಜೆಗೌಡ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದನು. ಬಳಿಕ ಧಾರವಾಡದಲ್ಲಿ ನಲೆಸಿದ್ದ ಆರೋಪಿ, ಇಲ್ಲಿಂದಲೇ ಕೃತ್ಯ ಎಸಗುತಿದ್ದನು.

Leave a Reply

Your email address will not be published. Required fields are marked *