ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು ವಂಚಕರು ಹೊಸ ಹೊಸ ವಿಧಾನಗಳ ಮೂಲಕ ವಂಚಿಸಲು ಪ್ರಾರಂಭಿಸಿದ್ದಾರೆ. 2022-23ನೇ ಆರ್ಥಿಕ ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನವಾಗಿತ್ತು. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡಿದವರಿಗೆ ಈಗ ರೀಫಂಡ್ ಸಿಗುತ್ತಿದೆ. ಇದೀಗ ಈ ತೆರಿಗೆ ರೀಫಂಡ್ ಅನ್ನೇ ವಂಚಕರು ತಮ್ಮ ವಂಚನೆಗೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಹೆಸರಲ್ಲಿ ತೆರಿಗೆದಾರರನ್ನು ವಂಚಕರು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ತೆರಿಗೆ ರೀಫಂಡ್ ಪಡೆಯಲು ನೀವು ಅರ್ಹರಾಗಿದ್ದೀರಿ ಎಂಬ ಸಂದೇಶವನ್ನು ತೆರಿಗೆದಾರರ ಮೊಬೈಲ್ ಗಳಿಗೆ ಕಳುಹಿಸುವ ಮೂಲಕ ವಂಚಿಸಲಾಗುತ್ತಿದೆ ಎಂಬ ಬಗ್ಗೆ ಪ್ರೆಸ್ ಇನ್ಫಾರ್ಮೇಷನ್ ಬ್ಯುರೋ (ಪಿಐಬಿ) ಫ್ಯಾಕ್ಟ್ ಚೆಕ್ ಅಧಿಕೃತ ಟ್ವಿಟ್ಟರ್ ಖಾತೆ ಇತ್ತೀಚೆಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
15,490ರೂ. ಆದಾಯ ತೆರಿಗೆ ರೀಫಂಡ್ ಪಡೆಯಲು ನೀವು ಅರ್ಹರಾಗಿದ್ದೀರಿ ಎಂಬ ಸಂದೇಶವನ್ನು ವಂಚಕರು ಮೊಬೈಲ್ ಗಳಿಗೆ ಕಳುಹಿಸುತ್ತಿದ್ದಾರೆ. ಈ ಸಂದೇಶಗಳನ್ನು ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಬಂದಿರುವ ಮಾದರಿಯಲ್ಲೇ ರೂಪಿಸಲಾಗಿರುತ್ತದೆ. ಈ ಸಂದೇಶದೊAದಿಗೆ ಒಂದು ಲಿಂಕ್ ಕೂಡ ಇರುತ್ತದೆ. ಖಾತೆ ಮಾಹಿತಿಗಳನ್ನು ದೃಢೀಕರಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಕೂಡ ಸಂದೇಶದಲ್ಲಿ ಮನವಿ ಮಾಡಲಾಗಿರುತ್ತದೆ. ಈ ಸಂದೇಶದ ಸತ್ಯಾಸತ್ಯತೆಯನ್ನು (ಫ್ಯಾಕ್ಟ್ ಚೆಕ್) ಪರಿಶೀಲಿಸಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯುರೋ (ಪಿಐಬಿ), ಈ ಸಂದೇಶ ನಕಲಿಯಾಗಿದ್ದು, ಆದಾಯ ತೆರಿಗೆ ಇಲಾಖೆ ಇಂಥ ಯಾವುದೇ ಸಂದೇಶಗಳನ್ನು ಕಳುಹಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಅಲ್ಲದೆ, ಇಂಥ ಸಂದೇಶಗಳ ಬಗ್ಗೆ ಎಚ್ಚರದಿಂದ ಇರುವಂತೆ ಹಾಗೂ ಪ್ರತಿಕ್ರಿಯಿಸುವ ಮೂಲಕ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದAತೆ ಸಲಹೆ ನೀಡಿದೆ.