ಬೆಂಗಳೂರು (ಜೂ.30): ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್.ಪುರಂ ತಹಸೀಲ್ದಾರ್ ಅಜಿತ್ ಕುಮಾರ್ ರೈ ಸೇರಿ ನಾಲ್ವರು ಸಹೋದರರಿಗೆ ವಿಚಾರಣೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ನೀಡಿದೆ.
ಇಂದು ಮುಂಜಾನೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ನೊಟೀಸ್. ಅಜಿತ್ ರೈ ಸಹೋದರರಾದ ಆಶಿಕ್ ರೈ, ಸ್ನೇಹಿತರಾದ ಗೌರವ ,ಹರ್ಷವರ್ಧನ್ ಸೇರಿದಂತೆ ನಾಲ್ವರಿಗೂ ಲೋಕಾಯುಕ್ತ ನೋಟೀಸ್ ನೀಡಿದೆ.
ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬAಧ ಸಹಕಾರ ನಗರದ ಅಜಿತ್ ನಿವಾಸ ಸೇರಿ 12 ಕಡೆ ದಾಳಿ ಮಾಡಿದ್ದ ಲೋಕಾಯುಕ್ತ ಅದಿಕಾರಿಗಳು ಪರಿಶೀಲನೆ ವೇಳೆ ಮನೆಯಲ್ಲಿ ಕೋಟ್ಯಂತರ ರೂ 11 ಲಕ್ಸುರಿ ಕಾರುಗಳು, ಭೂದಾಖಲಾತಿ ಪತ್ರಗಳು, ಅವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರುವ ಬಗ್ಗೆಯೂ ದಾಖಲೆಗಳು ಪತ್ತೆಯಾಗಿತ್ತು. ದೇಶ-ವಿದೇಶಿ ಬ್ರ‍್ಯಾಂಡ್ ನ ಮದ್ಯಗಳೂ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಜಿತ್ ರೈ ನನ್ನು ಅಧಿಕಾರಿಗಳು ಬಂಧಿಸಿದ್ದರು.
ಇAದು ಬೆಳಗ್ಗೆ 11 ಗಂಟೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ 10 ದಿನಗಳ ಕಾಲ ಅಜಿತ್ ನನ್ನ ಪೊಲೀಸ್ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಸಹೋದರರು, ಸ್ನೇಹಿತರ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿರುವ ಹಿನ್ನೆಲೆ ಸಹೋದರ ಹಾಗೂ ಸ್ನೇಹಿತರಿಗೂ ಡ್ರಿಲ್ ಮಾಡಲೂ ಖಾಕಿ ಸಿದ್ದತೆ ನಡೆಸಿದೆ. ಹೀಗಾಗಿ ಸದ್ಯ ನಾಲ್ವರಿಗೆ ನೊಟೀಸ್ ಕೊಟ್ಟು ವಿಚಾರಣೆ ನಡೆಸಲು ಮುಂದಾಗಿದೆ.