Share this news

ಕಾರ್ಕಳ: ಮಂದಿರಗಳು ನಮ್ಮ ಸಂಸ್ಕಾರದ ಕೇಂದ್ರಬಿಂದು ಅವುಗಳ ಜೀರ್ಣೋದ್ದಾರದಿಂದ ನಮ್ಮ ಆತ್ಮದ ಜೀರ್ಣೋದ್ಧಾರವಾಗುತ್ತದೆ.ಸಂಸ್ಕೃತಿ ಇಲ್ಲವಾದರೆ ನಮ್ಮ ಅಸ್ತಿತ್ವವೇ ಇರಲು ಸಾಧ್ಯವಿಲ್ಲ ಎಂದು 108 ಅಮರಕೀರ್ತಿ ಜೈನಮುನಿಗಳು ಹೇಳಿದರು
ಅವರು ಕಾರ್ಕಳದ ಆನೆಕೆರೆ ಕೆರೆ ಬಸದಿಯ ಜೀರ್ಣೋದ್ಧಾರ ಪ್ರಯುಕ್ತ ನಡೆಯುತ್ತಿರುವ ಪಂಚಕಲ್ಯಾಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶಿಲೆಗೆ ದೈವತ್ವ ನೀಡುವುದಾದರೆ,ಮನುಷ್ಯರಿಗೆ ದೈವತ್ವ ನೀಡಲು ಯಾಕೆ ಸಾಧ್ಯವಿಲ್ಲ ಎಂದರು‌. ಪರರ ಕಷ್ಟಕ್ಕೆ ಸ್ಪಂದಿಸುವ ಗುಣ ರೂಢಿಸಿಕೊಂಡಾಗ ಮನುಷ್ಯ ವಿಶೇಷನಾಗುತ್ತಾನೆ ಎಂದರು.
ಜೈನಮುನಿ 108 ಅಮೋಘಕೀರ್ತಿ ಮುನಿಗಳು ಆಶೀರ್ವಚನ ನೀಡಿ,ಆತ್ಮದ ಪರಮಾತ್ಮನ ಯಾತ್ರೆಯೇ ಪಂಚಕಲ್ಯಾಣ ಮಹೋತ್ಸವದ ಮೂಲ ಉದ್ದೇಶ.ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಕ್ರಾಂತಿಯನ್ನೇ ಮಾಡಬಹುದು.ಪ್ರತಿಯೊಂದು ಆತ್ಮದಲ್ಲಿಯೂ ಭಗವಂತನ ಪ್ರಖರ ಬೆಳಕಿದೆ.ನಮ್ಮ ಅರಿಷ್ವರ್ಗಗಳು ನಮ್ಮ ಅತ್ಮಕ್ಕೆ ಕವಿದ ಮೋಡಗಳಂತೆ ಇರುತ್ತದೆ,ಆದ್ದರಿಂದ ಈ ಅರಿಷ್ವರ್ಗಗಳನ್ನು ತೊರೆದಾಗ ಮೋಡಗಳು ಕರಗಿ ಆತ್ಮದ ಬೆಳಕು ಪ್ರಕಾಶಿಸಲು ಸಾಧ್ಯವಿದೆ ಎಂದರು.

ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ,
ಲಕ್ಷ್ಷೀಸೇನ ಭಟ್ಟಾರಕ ಮಹಾಸ್ವಾಮಿ,ಪದ್ಮಶ್ರೀ ಅಮ್ಮನವರು ಆಶೀರ್ವಚನ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ಉಡುಪಿ ಶಾಸಕ ಯಶಪಾಲ್ ಸುವರ್ಣ, ಪಂಚಕಲ್ಯಾಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್, ಎಂ.ಕೆ ವಿಜಯಕುಮಾರ್, ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ ಮುಡಾರು,ಮಹೇಂದ್ರ ವರ್ಮ ಮುಂತಾದವರು ಉಪಸ್ಥಿತರಿದ್ದರು.
ಎಂ.ಕೆ ವಿಜಯಕುಮಾರ್ ಸ್ವಾಗತಿಸಿದರು.
ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *