ಬೆಂಗಳೂರು: ಸ್ವಂತ ಮನೆ, ಜಮೀನು, ಸೈಟ್ ಖರೀದಿಸುವವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಆಸ್ತಿಗಳ ಮಾರ್ಗಸೂಚಿ ಬೆಲೆಯಲ್ಲಿ ಶೇ.20ರಿಂದ 40 ರಷ್ಟು ಭಾರೀ ಹೆಚ್ಚಳ ಮಾಡುವ ಸಂಬAಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ

ರಾಜ್ಯದಲ್ಲಿ 2019 ರ ನಂತರ ಆಸ್ತಿಗಳ ಮಾರ್ಗಸೂಚಿ ಬೆಲೆಯಲ್ಲಿ ಹೆಚ್ಚಳ ಮಾಡಿಲ್ಲ.ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಹಿನ್ನಲೆಯಲ್ಲಿ ಆಸ್ತಿಗಳ ನೋಂದಣಿ ಕುಸಿದು ಹೋಗಿದ್ದ ಹಿನ್ನಲೆಯಲ್ಲಿ ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಿರಲಿಲ್ಲ. ಹಾಗಾಗಿ ಈ ಬಾರಿ ಶೇ. 20-40 ರಷ್ಟು ಮಾರ್ಗಸೂಚಿ ದರ ಹೆಚ್ಚಳಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಾಜ್ಯದಲ್ಲಿ 255 ಉಪನೋಂದಣಿ ಕಚೇರಿಗಳಿದ್ದು, ಅವುಗಳ ಪೈಕಿ ಶೇ. 10 ರಷ್ಟು ಕಚೇರಿಗಳ ವ್ಯಾಪ್ತಿಯಲ್ಲಿ ಮಾತ್ರ ಮಾರ್ಗಸೂಚಿ ಬೆಲೆ ಕಡಿಮೆ ಇದೆ. ಮುಂದೆ ಎಲ್ಲಾ ಕಡೆ ಮಾರ್ಗಸೂಚಿ ದರ ಹೆಚ್ಚಳವಾದ್ರೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಏರಿಕೆಯಾಗಲಿದೆ. ಇದರಿಂದ ಕಷ್ಟಪುಟ್ಟು ಸ<ಪಾದಿಸಿದ ಹಣದಲ್ಲಿ ಸ್ವಂತ ನಿವೇಶನವನ್ನು ಖರೀದಿಸುವವರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಗಳಿವೆ. ಸರ್ಕಾರವು ಎಲ್ಲಾ ಮೂಲಗಳಿಂದ ಗ್ಯಾರಂಟಿಗಳ ಜಾರಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ಮುದ್ರಾಂಕ ಹಾಗೂ ನೋಂದಣೆ ಇಲಾಖೆಯ ಮಾರ್ಗಸೂಚಿ ದರ ಹೆಚ್ಚಿಸುವ ಖಚಿತ ಎನ್ನಲಾಗುತ್ತಿದೆ.

