ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ತುದಿಯಡ್ಕ ಬಳಿಯ ತೋಟದಲ್ಲಿ ಆಹಾರ ಆರಸುತ್ತ ಹೋಗಿ ಕಾಡಾನೆ ಹಿಂಡುಯೊಂದು ಕಾಲುವೆಗೆ ಬಿದ್ದು ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ಕಾಲುವೆಗೆ ಕಾಡಾನೆ ಹಿಂಡು ಬಿದ್ದಿರುವುದನ್ನು ಕಂಡ ಸ್ಥಳೀಯ ಗ್ರಾಮಸ್ಥರು, ಕಾಡಾನೆಯನ್ನು ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ. ಕಾಡಾನೆ ಮೇಲೆ ಬರಲು ಪುಡಿಗಲ್ಲುಗಳನ್ನು ಹಾಕಿ ದಾರಿ ಮಾಡಿಕೊಟ್ಟಿದ್ದಾರೆ. ಸುಳ್ಯ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ನೇತತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಕಾಲುವೆ ಬಿದ್ದು ಒಡ್ಡಾಡುತ್ತಿದ್ದ 4 ಕಾಡಾನೆಗಳು ಪ್ರಾಣಾಪಾಯದಿಂದ ಪಾರಾಗಿದ್ದು ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಬಿಟ್ಟಿದ್ದಾರೆ.