ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಸ್ಕೀಮ್ ಜೂನ್ 30ರ ತಡರಾತ್ರಿಯಿಂದಲೇ ಅಧಿಕೃತವಾಗಿ ಆರಂಭವಾಗಿದೆ.ರಾತ್ರಿ 12 ಗಂಟೆಯಿAದಲೇ ಪ್ರತಿ ಯುನಿಟ್ ಕೌಂಟ್ ಶುರುವಾಗಿದೆ. ಜುಲೈ ತಿಂಗಳ ಬಿಲ್ ಬರುವ ಮುನ್ನ ಅರ್ಜಿ ಸಲ್ಲಿಸದಿದ್ದರೆ ಗೃಹಜ್ಯೋತಿ ಅನ್ವಯವಾಗುವುದಿಲ್ಲ. ಜುಲೈ ತಿಂಗಳ ಕರೆಂಟ್‌ಗೆ ಹಣ ಕಟ್ಟಲೇಬೇಕು. ಆದ್ದರಿಂದ ಅರ್ಜಿ ಸಲ್ಲಿಸದವರು ಇಂದೇ ಅರ್ಜಿ ಸಲ್ಲಿಸಿಬಿಡಿ.
ಸರ್ಕಾರ ಗೃಹಜ್ಯೋತಿ ಯೋಜನೆಯನ್ನ ಜಾರಿ ಮಾಡಲು ಸಕಲು ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇಂದಿನಿAದ ಅಧಿಕೃತವಾಗಿ ಈ ಯೋಜನೆ ಆರಂಭವಾಗಿದೆ. ಹೌದು ಜೂನ್ 30ರ ರಾತ್ರಿ 12ಗಂಟೆಯಿAದ ಅಂದ್ರೆ ಜುಲೈ 01ರಿಂದ ಗೃಹಜ್ಯೋತಿ ಸ್ಕೀಮ್ ಅಧಿಕೃತವಾಗಿ ಆರಂಭವಾಗಿದ್ದು, 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ಸ್ಕೀಮ್ ಕೌಂಟ್ ಆಗಲಿದೆ. ಇನ್ನು ಗೃಹಜ್ಯೋತಿ ಯೋಜನೆಯ ಪ್ರಕಾರ 12 ತಿಂಗಳ ಸರಾಸರಿ ಬಳಕೆ 187 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. ಇದರಲ್ಲಿ 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದ್ದು, 12 ತಿಂಗಳ ಸರಾಸರಿಯ ಬಿಲ್ ನಲ್ಲಿ 187 ಯುನಿಟ್ ಬಂದರೂ 10% ಸರಾಸರಿ ನೀಡಲಾಗುತ್ತೆ. ತದನಂತರ 200 ಯುನಿಟ್ ಮೇಲೆ 10 ಯುನಿಟ್ ಜಾಸ್ತಿ ಬಂದರೂ ಬಿಲ್ ಬರಲಿದೆ.
ಆಗಸ್ಟ್ ತಿಂಗಳಿನಿAದ ಗೃಹಜ್ಯೋತಿ ಸ್ಕೀಮ್ ಉಪಯೋಗ ಪಡೆದುಕೊಳ್ಳಬಹುದಾಗಿದ್ದು, ಸದ್ಯ ಜೂನ್ ತಿಂಗಳ ಬಿಲ್ ಜುಲೈ ತಿಂಗಳಿನಲ್ಲಿ ಬರಲಿದೆ. ಜುಲೈ ತಿಂಗಳ ಪವರ್ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಅಗಸ್ಟ್ ತಿಂಗಳಲ್ಲಿ ಬರುವ ಕರೆಂಟ್ ಬಿಲ್ ನಲ್ಲಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ವಿದ್ಯುತ್ ಬಿಲ್ ನಲ್ಲಿ ಹೆಸರು ಬರುವ ಸಾಧ್ಯತೆ ಇದೆ.
ಇನ್ನು ರಾಜ್ಯದಲ್ಲಿ ಒಟ್ಟು ಗೃಹಜ್ಯೋತಿಯ ಫಲಾನುಭವಿಗಳು 2.14 ಕೋಟಿಯಷ್ಟು ಜನರಿದ್ದು, ಇದರಲ್ಲಿ ಸಧ್ಯ ಗೃಹಜ್ಯೋತಿಗೆ 80,99,932 ರಷ್ಟು ಜನರು ನೋಂದಣಿ ಮಾಡಿದ್ದಾರೆ. ಇನ್ನು 1,33,00,068 ಕೋಟಿಯಷ್ಟು ಜನ ನೋಂದಣಿಗೆ ಅರ್ಜಿ ಹಾಕಬೇಕು. ಇನ್ನು ಈ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನ ಜೂನ್ 18 ರಿಂದ ಆರಂಭ ಮಾಡಲಾಗಿದ್ದು, ಒಟ್ಟು 11 ದಿನಗಳಿಂದ ಒಟ್ಟು 80,99,932 ರಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಉಳಿದಿರುವ 1.13 ಕೋಟಿಯಷ್ಟು ಅರ್ಜಿ ಸಲ್ಲಿಕೆಗೆ ಇನ್ನು 15 ದಿನವಾದ್ರು ಬೇಕಾಗಲಿದೆ. ಇನ್ನು ಅರ್ಜಿ ಸಲ್ಲಿಕೆಯಾಗಿದ್ರೆ ಮಾತ್ರ ಆಗಸ್ಟ್ ತಿಂಗಳಿನಿAದ ಫ್ರೀ ಗೃಹಜ್ಯೋತಿ ಸ್ಕೀಂ ಸಿಗಲಿದ್ದು, ಸಧ್ಯ ಬೆಸ್ಕಾಂ ನಿಂದ ಗೃಹಜ್ಯೋತಿ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.