Share this news

ನವದೆಹಲಿ:  ಕೇಂದ್ರ ಸರ್ಕಾರವು ಇಂದಿನಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಸಲಿದೆ. ಇಂದು ಹಳೆ ಸಂಸತ್ ಭವನದಲ್ಲಿ ಕಲಾಪ ಆರಂಭವಾಗಲಿದ್ದು, ನಾಳೆಯಿಂದ ಹೊಸ ಸಂಸತ್ ಭವನದ ಕಟ್ಟಡದಲ್ಲಿ ಅಧಿಕೃತ ಕಲಾಪ ಆರಂಭವಾಗಲಿದೆ. ಸಂಸತ್ ಕಲಾಪಕ್ಕೆ 75 ವರ್ಷದ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನ ನಡೆಸಲಾಗುತ್ತಿದೆ, 1946ರ ಡಿಸೆಂಬರ್ 9ರಂದು ಮೊದಲ ಅಧಿವೇಶನ ನಡೆದಿತ್ತು.

ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ, ಏಕರೂಪ ನಾಗರಿಕ ಸಂಹಿತೆ, ಒನ್ ನೇಷನ್ ಒನ್ ಎಲೆಕ್ಷನ್ ಸೇರಿದಂತೆ ಎಂಟು ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.
ಸಂಸತ್ತಿನ 75 ವರ್ಷಗಳ ಹಾದಿಯ ಬಗ್ಗೆ ಚರ್ಚೆ ಮತ್ತು ನಾಲ್ಕು ಮಸೂದೆ ಮಂಡನೆ, ಉದ್ದೇಶವನ್ನು ಈ ವಿಶೇಷ ಅಧಿವೇಶನದಲ್ಲಿ ಹೊಂದಿರುವುದಾಗಿ ಸರ್ಕಾರ ಹೇಳಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು ಒಂದು ದೇಶ ಒಂದು ಚುನಾವಣೆ ಏಕರೂಪ ನಾಗರಿಕ ಸಮಿತಿ ಯಂತಹ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

1. ವಕೀಲರ (ತಿದ್ದುಪಡಿ) ಮಸೂದೆ, 2023 2. ಪತ್ರಿಕಾ ಮತ್ತು ಆವರ್ತಕ ನೋಂದಣಿ ಮಸೂದೆ, 2023 ( ಇವುಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಗುವುದು ಆಗಸ್ಟ್ 3 ರಂದು ರಾಜ್ಯಸಭೆಯಲ್ಲಿ ಎರಡು ಮಸೂದೆ ಅಂಗೀಕರಿಸಲಾಯಿತು) 3. ಪೋಸ್ಟ್ ಆಫೀಸ್ ಬಿಲ್, 2023 4. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಅನ್ನು ರಾಜ್ಯಸಭೆಯಲ್ಲಿ ಚರ್ಚಿಸಲಾಗುವುದು (ಈ ಎರಡೂ ಮಸೂದೆಗಳನ್ನು ಆಗಸ್ಟ್ 10 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಯಿತು) 5. ಮೊದಲ ದಿನವಾದ ಇಂದು 75 ವರ್ಷಗಳ ಸಂಸದೀಯ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳ ಕುರಿತು ಚರ್ಚೆ ನಡೆಯಲಿದೆ. ಇದಲ್ಲದೆ, ಸ್ವಾತಂತ್ರ್ಯದ ಅಮರ ಅವಧಿಯ ಬಗ್ಗೆಯೂ ಚರ್ಚೆ ನಡೆಯಲಿದೆ. ಜೊತೆಗೆ ಚಂದ್ರಯಾನ -3 ಮಿಷನ್ ಮತ್ತು ಜಿ 20 ಶೃಂಗಸಭೆಯಲ್ಲಿ ಪ್ರಸ್ತಾಪಗಳನ್ನು ತರಲಾಗುವುದು. 6. ಇವುಗಳ‌ ನಡುವೆ ಸರ್ಕಾರ ಅಚ್ಚರಿಯ ರೀತಿಯಲ್ಲಿ ವಿಶೇಷ ಮಸೂದೆ ಮಂಡಿಸುವ ಸಾಧ್ಯತೆಗಳಿವೆ.

   

 

Leave a Reply

Your email address will not be published. Required fields are marked *