ಬೆಂಗಳೂರು: ರಾಜ್ಯದಾದ್ಯಂತ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆಯಾಗಿದ್ದು, ಇಂದಿನಿಂದ ಆಸ್ತಿ ನೋಂದಣಿ ಶೇಕಡ 20 ರಿಂದ 30ರವರೆಗೆ ದುಬಾರಿ ಆಗಲಿದೆ.
ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುವ ಆಸ್ತಿಗಳಿಗೆ ಪರಿಷ್ಕೃತ ಮಾರ್ಗಸೂಚಿ ದರ ಅನ್ವಯವಾಗಲಿದ್ದು, ಶೇಕಡ 20 ರಿಂದ 30ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಹೆಚ್ಚಾಗಲಿದೆ.
ಸೆ. 29ಕ್ಕೆ ರಾಜ್ಯದಲ್ಲಿ ಹಳೆಯ ಮಾರ್ಗಸೂಚಿ ದರ ಅನ್ವಯ ಆಸ್ತಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು ಅಕ್ಟೋಬರ್ 2ರಂದು ಸತತವಾಗಿ ರಜೆ ಇದ್ದ ಕಾರಣ, ಅಕ್ಟೋಬರ್ 3ರಿಂದ ಹೊಸ ಮಾರ್ಗಸೂಚಿ ದರದ ಅನ್ವಯ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಇಂದಿನಿಂದ ಆಸ್ತಿ ಖರೀದಿದಾರರಿಗೆ ಹೆಚ್ಚಿನ ಶುಲ್ಕದ ಹೊರೆ ಬೀಳಲಿದೆ.