Share this news

ಉಡುಪಿ: ಮುಂಗಾರು ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದAತೆಯೇ ಕಡಲಮಕ್ಕಳಿಗೆ ಇನ್ನು ಎರಡು ತಿಂಗಳು ರಜೆ ಸಿಗಲಿದೆ. ಜೂನ್ 1ರಿಂದ ಮುಂದಿನ ಎರಡು ತಿಂಗಳ ಅವಧಿಗೆ ಯಾಂತ್ರೀಕೃತ  ಮೀನು ಗಾರಿಕೆಗೆ ಸಂಪೂರ್ಣ ವಿರಾಮ ಸಿಗಲಿದೆ. ಈ ಬಾರಿಯ ಮೀನುಗಾರಿಕಾ ಋತು ಬುಧವಾರ ಮುಕ್ತಾಯಗೊಂಡಿದೆ.ಪ್ರತಿ ವರ್ಷದಂತೆ ಈ ಬಾರಿಯೂ ಮೀನು ಸಂತಾನೋತ್ಪತ್ತಿಯ ಅವಧಿಯಾಗಿರುವ ಜೂ.1ರಿಂದ ಜು.31ರವರೆಗೆ ಯಾಂತ್ರಿಕ ಮೀನುಗಾರಿಕೆ ಸಂಪೂರ್ಣ ಬಂದ್ ಆಗಲಿದೆ.


ಜೂನ್ ಹಾಗೂ ಜುಲೈ ತಿಂಗಳ ಅವಧಿಗೆ ಮೀನುಗಾರಿಕೆಗೆ ನಿಷೇಧವಿರುವ ಕಾರಣದಿಂದ ಬಹುತೇಕ ಯಾಂತ್ರೀಕೃತ ದೋಣಿಗಳು ಮಲ್ಪೆಯಲ್ಲಿ ಲಂಗರು ಹಾಕಿವೆ. ಇನ್ನು ಎರಡು ತಿಂಗಳ ಕಾಲ ಮೀನು ಪ್ರಿಯರಿಗೆ ಮೀನು ಊಟ ದುಬಾರಿಯಾಗಲಿದೆ. ಈ ಅವಧಿಯಲ್ಲಿ ದೋಣಿಗಳ ಮೂಲಕ ನಡೆಸಬಹುದಾದ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶವಿದ್ದರೂ, ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಇರುವುದರಿಂದ ಸಹಜವಾಗಿ ಮೀನಿನ ದರ ಗಗನಕ್ಕೇರಲಿದೆ.


2022-23ರ ಮೀನುಗಾರಿಕೆ ಋತುವಿನಲ್ಲಿ ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂಪರ್ ಮೀನುಗಾರಿಕೆ ನಡೆದಿತ್ತು. ಈ ಬಾರಿಯ ಖುತುವಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೀನಿನ ದರ ತೀರ ಅಗ್ಗವಾಗಿತ್ತು.ಈ ಬಾರಿ ಬಂಗುಡೆ ಮೀನು ಯಥೇಚ್ಛವಾಗಿ ದೊರೆತಿದ್ದು, ಇದರಿಂದ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣದಿಂದ ಮೀನಿನ ದರ ಕುಸಿದಿತ್ತು ಇದರಿಂದ ಗ್ರಾಹಕರಿಗೆ ಭಾರೀ ಅಗ್ಗದ ದರದಲ್ಲಿ ಮೀನು ಸಿಗುತ್ತಿತ್ತು.

Leave a Reply

Your email address will not be published. Required fields are marked *