ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಇದೇ ವಿಚಾರಕ್ಕೆ ಸಂಧಿಸಿದAತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಟ್ವೀಟ್ ವಾರ್ ನಡೆದಿದ್ದು, ದಳಪತಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರವೂ ತಾರಕಕ್ಕೇರಿದೆ.

ವೈಎಸ್‌ಟಿ ಆರೋಪಕ್ಕೆ ದಾಖಲೆ ಇಟ್ಟು ಮಾತನಾಡಲಿ, ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ, ಇಂದು ಮತ್ತೆ ಸರ್ಕಾರದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇಂಧನ ಇಲಾಖೆಯಲ್ಲೂ ವರ್ಗಾವಣೆ ದಂಧೆ ನಡೆಯುತ್ತಿದೆ. ನಿನ್ನೆ(ಜುಲೈ 04) ಇಂಧನ ಇಲಾಖೆಯಲ್ಲಿ ಎರಡು ಟ್ರಾನ್ಸ್ಫರ್ ಆಗಿದೆ. ಇಂಧನ ಇಲಾಖೆಯಲ್ಲಿ 10 ಕೋಟಿ ರೂ,ಗೆ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಆ ಅಧಿಕಾರಿ ದಿನಕ್ಕೆ 50 ಲಕ್ಷ ರೂ. ಕಮಿಷನ್ ಹೊಡೆಯುತ್ತಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವೈಎಸ್‌ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಆರೋಪಕ್ಕೆ ಕಾಂಗ್ರೆಸ್, ಕುಮಾರಸ್ವಾಮಿ ವಿರುದ್ಧ ಕೆಎಸ್‌ಟಿ ಬಾಣ ಬಿಟ್ಟಿದೆ. ತಾಜ್ ವೆಸ್ಟೆಂಡ್‌ನ ರೂಮಿನ ಬಾಡಿಗೆಗೆ ಹಣ ಎಲ್ಲಿಂದ ಕಟ್ಟಿದ್ದೀರಿ ಉಳುಮೆ ಮಾಡಿ ಕಟ್ಟಿದ್ದಾ ಎಂದು ಪ್ರಶ್ನಿಸಿದೆ. ಇದಕ್ಕೆ ಇದೀಗ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಎಸ್‌ಟಿ ಟ್ಯಾಕ್ಸ್ ನಾನ್ ಇಟ್ಟುಕೊಂಡಿಲ್ಲ. ತಾಜ್ ವೆಸ್ಟೆಂಡ್ ದ್ದು ಬಾಕಿ ಬಿಲ್ ಕಾಂಗ್ರೆಸ್‌ಗೆ ಕಳಿಸಿದ್ರಾ ನಾನೇನು ಬೀದಿಲಿ ಹೋಗುವವರಾ ಎರಡು ಮೂರು ಲಕ್ಷ ರೂ. ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದರು.

ತಾಜ್ ವೆಸ್ಟ್ ಎಂಡ್‌ನಲ್ಲಿ ಈಗಲೂ ರೂಂ ಇದೆ. ಇವರನ್ನು ಕೇಳಿ ನಾನು ರೂಂ ಮಾಡಬೇಕಾ. ಎಷ್ಟು ಗಂಟೆಗೆ ವಾಶ್‌ರೂಂಗೆ ಹೋಗಬೇಕು ಎಂದು ಕಾಂಗ್ರೆಸ್‌ನವರನ್ನ ಕೇಳಬೇಕಾ ನಾನು ರೌಡಿಗಳಿಗೆ ಬಾಟಲ್ ತಂದುಕೊಟ್ಟವನಲ್ಲ. ನಾನು ಬ್ಲೂಫಿಲ್ಮ್ ತೋರಿಸಿದವನಲ್ಲ. ನನ್ನ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ಕಿಡಿಕಾರಿದ್ದಾರೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು. ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ. ಮೈ ಪರಚಿಕೊಳ್ಳಬೇಡಿ ಎಂದು ಗುಂಡೂರಾವ್ ಹೇಳಿದ್ದಾರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ. ಸೋತಾಗಲೂ ಜನರ ಕಷ್ಟ ಸುಃಖ ಕೇಳಿದ್ದೇವೆ. ಬ್ಲೂಪಿಲ್ಮಂ ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದರು.

