ಉಡುಪಿ: ಪ್ಯಾಲಸ್ತೀನ್ ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್ ನಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಉಡುಪಿ ಜಿಲ್ಲೆಯಿಂದ ಇಸ್ರೇಲಿಗೆ ವ್ಯಾಪಾರ,ಉದ್ಯೋಗ,ಶಿಕ್ಷಣ ಮುಂತಾದ ಉದ್ದೇಶಗಳಿಗೆ ತೆರಳಿರುವವರ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತುರ್ತು ಕಂಟ್ರೋಲ್ ರೂಂ ತೆರೆಯಲಾಗಿದೆ.
ಇಸ್ರೇಲ್ ನಲ್ಲಿರುವ ತಮ್ಮ ಸಂಬAಧಿಕರ ಮಾಹಿತಿ ನೀಡಲು ಕಂಟ್ರೋಲ್ ರೂಂ ಸಂಖ್ಯೆ 1077/ 0820-2574802 ಅಥವಾ ರಾಜ್ಯ ಸರ್ಕಾರದ ತುರ್ತು ಸಂಖ್ಯೆ ಸಂಖ್ಯೆ: 080-22340676 ಅಥವಾ 080-22253707ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ