Share this news

ಬೆಳಗಾವಿ : ಇಸ್ರೋ ವಿಜ್ಞಾನಿಗಳ ಸಾಧನೆ ಪ್ರಕಾಶ್ ರಾಜ್ ಮುಖಕ್ಕೆ ಕ್ಯಾಕರಿಸಿ ಉಗಿದಂತಾಗಿದೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.


ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಇಸ್ರೋ ವಿಜ್ಞಾನಿಗಳ ತಂಡ ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿದ್ದಕ್ಕೆ ಈ ಬುದ್ಧಿಜೀವಿಗಳು ಅಪಹಾಸ್ಯ ಮಾಡಿದ್ದಾರೆ. ಕೆಟ್ಟದಾಗಿ ಚಿತ್ರಿಸಿ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಪ್ರಕಾಶ್ ರಾಜ್ ಮತ್ತವರ ಬುದ್ಧಿಜೀವಿಗಳ ತಂಡ ಈ ದೇಶದಲ್ಲಿ ಹುಟ್ಟಿರೋದೆ ದೊಡ್ಡ ಕಳಂಕ. ನಮ್ಮ ಭಾರತ ಆಸ್ತಿಕರ ನಂಬಿಕೆ ಇರುವ ಧಾರ್ಮಿಕ ಸಂಪ್ರದಾಯದ ದೇಶ. ನಾಸ್ತಿಕರಾದ ಇವರೆಲ್ಲ ಚೀನಾದಲ್ಲಿ ಹುಟ್ಟುಬೇಕಿತ್ತು. ತಪ್ಪಿ ಇಲ್ಲಿ ಹುಟ್ಟಿ ದೇಶಕ್ಕೆ ದೊಡ್ಡ ಕಳಂಕರಾಗಿದ್ದಾರೆ. ನಮ್ಮ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದರಿAದಲೇ ಇಡೀ ಜಗತ್ತೇ ತಿರುಗಿನೋಡುವಂತೆ ಸಾಧನೆ ಮಾಡಲು ಸಾಧ್ಯವಾಗಿದೆ. ವಿಜ್ಞಾನಿಗಳ ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ. ಈ ಸಾಧನೆ ಪ್ರಕಾಶ್ ರಾಜ್ ಮುಖಕ್ಕೆ ಉಗುಳಿದಂತಾಗಿದೆ ಎಂದರು.

ಇಸ್ರೋ ವಿಜ್ಞಾನಿಗಳು ಉಡಾವಣೆ ಮುನ್ನ ತಿರುಪತಿಗೆ ಹೋಗಿ ದರ್ಶನ ಪಡೆದು ಬಂದಿದ್ದರು. ಈ ಬಗ್ಗೆ ಬುದ್ಧಿಜೀವಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಿದ್ದರು. ಇನ್ನು ಪ್ರಕಾಶ ರಾಜ್ ಇಸ್ರೋ ಮಾಜಿ ಅಧ್ಯಕ್ ಕೆ ಶಿವನ್ ಅವರ ಫೋಟೊ ಕೆಟ್ಟದಾಗಿ ಚಿತ್ರಿಸಿ ಚಂದ್ರಯಾನ 3 ಕಳಿಸಿರುವ ಫೋಟೊ ಎಂದು ಟ್ವೀಟರ್‌ನಲ್ಲಿ ಹಂಚಿಕೊAಡಿದ್ದರು. ದೇಶಾದ್ಯಂತ ಜನರು ಪ್ರಕಾಶ್ ರಾಜ್ ವಿರುದ್ಧ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *