ಕಾರ್ಕಳ :ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರ ಅನುದಾನದಲ್ಲಿ ಈದು ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸ್ಮಾರು ಡಾಬಾ ಬಳಿ ಕಾಂಕ್ರಿಟ್ ರಸ್ತೆಯ ಗುದ್ದಲಿ ಪೂಜೆಯನ್ನು ಈದು ಪಂಚಾಯತ್ ಉಪಾಧ್ಯಕ್ಷ ಎನ್, ವಿಜಯ್ ಕುಮಾರ್ ಜೈನ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಪ್ರೇಮ್ ಕುಮಾರ್ ಜೈನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ, ಪಿಡಿಓ ಸುಧೀಂದ್ರ ರಾವ್, ಸದಸ್ಯರಾದ ಸುರೇಶ್. ರಮೇಶ್ ಜೆ. ಕೆ, ಜಯ ಸುವರ್ಣ,ರಮಣಿ, ನಯನ, ಪಿಡಬ್ಲ್ಯೂಡಿ ಕಂಟ್ರಾಕ್ಟರ್ ರೋಜ್ ಜೋಸೆಫ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವ ಪ್ರತಿನಿಧಿ ಮಲ್ಲಿಕಾ, ಹಾಗೂ ಸ್ಥಳೀಯರು ಹಾಜರಿದ್ದರು