ಕಾರ್ಕಳ: ಕಾರ್ಕಳ ತಾಲೂಕಿನ ಈದು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಥಮ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯ ಮುಂಭಾಗದಲ್ಲಿ ಜರುಗಿತು.
ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಸಂಘ ಸ್ಥಾಪನೆ ಪೂರ್ವ ಕೆಲಸ ಕಾರ್ಯದ ಬಗ್ಗೆ ತಿಳಿಸಿ, ಮುಂದಿನ ಯೋಜನೆಗಳಿಗೆ ಸಹಕಾರ ಕೋರಿದರು.
ಮುಖ್ಯ ಅತಿಥಿಗಳಾಗಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ ಮಾತನಾಡಿ, ನಂದಿನಿ ಲವಣ ಮಿಶ್ರಣ ಬಳಕೆ, ಒಕ್ಕೂಟದ ಯೋಜನೆಗಳ ಬಗ್ಗೆ ವಿವರಿಸಿದರು.
ಒಕ್ಕೂಟದ ವಿಸ್ತರಣಾಧಿಕಾರಿ ಕುಮಾರಿ ಅಶ್ವಿನಿ ಸಂಘದ ಉಪವಿಧಿಯನ್ನು ಮಂಡಿಸಿ, ಸಂಘದ ಕಾರ್ಯ ಚಟುವಟಿಕೆ, ಉದ್ದೇಶಗಳ ಕುರಿತು ತಿಳಿಸಿದರು. ಗೋಪಾಲ್ ಸುವರ್ಣ ಲೆಕ್ಕಪತ್ರ ವಾಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೊನ್ನಯ್ಯ ಶೆಟ್ಟಿ, ನಿರ್ದೇಶಕರಾದ ಅಶೋಕ ಕುಮಾರ್ ಜೈನ್, ಸುರೇಶ ಮಡಿವಾಳ, ಸಂತೋಷ್ ಕುಲಾಲ್ ಬನ್ನಡ್ಕ, ಜಯರಾಮ್ ಎಮ್.ವಿ, ರಮೇಶ ಎಮ್.ಕೆ, ಅರುಣ್ ದೇವಾಡಿಗ, ಲೋಲಾಕ್ಷಿ ಸತೀಶ್ ಪೂಜಾರಿ, ಸುಮನ ಹೆಗ್ಡೆ, ಶಾಂತಿಪ್ರಸಾದ್ ಜೈನ್, ಹರೀಶ್ ಪೂಜಾರಿ ಬಾಕ್ಯರೋಡಿ ಉಪಸ್ಥಿತರಿದ್ದರು.
ಸುಮತಿ ಪ್ರಾರ್ಥಿಸಿದರು. ನಿರ್ದೇಶಕ ಬಾಲಗಂಗಾಧರ ಬಿ ಗೌಡ ವಂದಿಸಿದರು. ಸಂಘದ ಸದಸ್ಯ ಪ್ರಶಾಂತ ಚಿತ್ತಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.