ಬೆಂಗಳೂರು :ರಾಜ್ಯದ ಜನತೆಗೆ ಗೃಹಬಳಕೆಯ ಉದ್ದೇಶಕ್ಕಾಗಿ ಮುಂದಿನ ಜುಲೈ 1ರಿಂದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ಸರ್ಕಾರ ಪ್ರತೀ ಯೂನಿಟ್ ಗೆ ಸರಾಸರಿ 1.50 ರೂ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರತೀ 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುತ್ತಿದ್ದು, ಈ ಹಿಂದೆ ಪೈಸೆ ಲೆಕ್ಕದಲ್ಲಿ ದರ ಏರಿಕೆ ಇದೀಗ ಮುಂದಿನ ಡಿಸೆಂಬರ್ ವರೆಗೆ ಬರೋಬ್ಬರಿ 1.50 ರೂ ಹೆಚ್ಚಿಸಿದೆ.ಇದು ರಾಜ್ಯದ ಎಲ್ಲಾ ಎಸ್ಕಾಂಗಳಿಗೂ ಅನ್ವಯವಾಗಲಿದೆ.ವಿದ್ಯುತ್ ಉತ್ಪಾದನಾ ವೆಚ್ಚ ಹಾಗೂ ನಿರ್ವಹಣಾ ವೆಚ್ಚದಲ್ಲಿ ಏರಿಕೆಯ ಕಾರಣದಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.