ಕಾರ್ಕಳ: ಇತಿಹಾಸಪ್ರಸಿದ್ದ ಕಾರ್ಕಳ ಮಾರಿಯಮ್ಮ ದೇವಿಯ ಜೀರ್ಣೋದ್ಧಾರ ಪ್ರಯುಕ್ತ ಬ್ರಹ್ಮಕಲಶೋತ್ಸವ ಅಂಗವಾಗಿ ಉಚ್ಚಂಗಿ ಮಾರಿಯಮ್ಮ ದೇವಿಯ ಪ್ರತಿಷ್ಠಾಪೂರ್ವಕ ಮೆರವಣಿಗೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.

ಕಾರ್ಕಳದ ವೆಂಕಟರಮಣ ದೇವಸ್ಥಾನದಿಂದ ಹೊರಟ ಉಚ್ಚಂಗಿ ಮಾರಿಯಮ್ಮ ದೇವಿಯ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಚಂಡೆ,ವಿವಿಧ ಭಜನಾ ತಂಡಗಳು, ವಿವಿಧ ಟ್ಯಾಬ್ಲೋಗಳು ಭಾಗವಹಿಸಿ ಗಮನ ಸೆಳೆದವು.
ದೇವಳದ ಆಡಳಿತ ಮೊಕ್ತೇಸರರಾದ ಕೆ.ಬಿ ಗೋಪಾಲಕೃಷ್ಣ, ಉಚ್ಚಂಗಿ ದೇವಸ್ಥಾನ ಆಡಳಿತ ಮಂಡಳಿಯ ಸುರೇಂದ್ರ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿಜಯ ಶೆಟ್ಟಿ, ನವೀನ್ ನಾಯಕ್, ಪ್ರತಿಮಾ ರಾಣೆ, ನವೀನ್ ದೇವಾಡಿಗ ಮುಂತಾದವರು ಮೆರವಣಿಗೆಯಲ್ಲಿ ಭಾಗವಹಿಸಿದರು.

