ಬೆಳ್ತಂಗಡಿ: ಉಜಿರೆ ಗ್ರಾಮದ ದೊಂಪದಪಲ್ಕೆ ನಿವಾಸಿ ಕೋಟಪ್ಪ ಪೂಜಾರಿ ಎಂಬವರು ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ ಪ್ರಯುಕ್ತ ಧನಸಹಾಯ ವಿತರಿಸಲಾಯಿತು.
ವಿಕಲಚೇತನ ಗುರುತಿನ ಚೀಟಿಯು ನವೀಕರಣ ಮಾಡುವ ಸಲುವಾಗಿ ಸಿಟಿ ಸ್ಕ್ಯಾನಿಂಗ್ ಮಾಡಲು ವೈದ್ಯರು ಸಲಹೆ ನೀಡಿದ್ದು ಕೋಟಪ್ಪ ಪೂಜಾರಿಯವರ ಆರ್ಥಿಕ ಸ್ಥಿತಿ ಕಷ್ಟಕರವಾದುದರಿಂದ ಸಿಟಿ ಸ್ಕ್ಯಾನಿಂಗ್ ಮಾಡಿಸಲು ರಾಜ ಕೇಸರಿ ಸಂಘಟನೆ ಧನಸಹಾಯ ಮಾಡಿ ಮಾನವೀಯತೆ ಮೆರೆದಿದೆ.
ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ,ರಾಜ ಕೇಸರಿ ಬೆಳ್ತಂಗಡಿ ತಾಲೂಕ ಅಧ್ಯಕ್ಷರಾದ ಸಂದೀಪ್,ರಾಜ ಕೇಸರಿ ಸಂಘಟನೆಯ ಗೌರವ ಸಲಹೆಗಾರ ಪ್ರೇಮ್ ರಾಜ್ ರೋಶನ್ ಸಿಕ್ಕೇರಾ,ಸಂಘಟನೆ ಸದಸ್ಯರಾದ ಶಶಿಕಾಂತ್ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಉಪಸ್ಥಿತರಿದ್ದರು