ಉಡುಪಿ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಫೆ.27ರಂದು ಉಡುಪಿಯಲ್ಲಿ ಜರುಗಿತು.
ಭಾರತ ಸ್ವಾಭಿಮಾನ ಟ್ರಸ್ಟ್ನ ಚಿಕ್ಕಮಗಳೂರು ಜಿಲ್ಲಾ ಪ್ರಭಾರಿ ಹಾಗೂ ಯೋಗ ಶಿಕ್ಷಕ ದಿವಾಕರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗೋಸ್ಕರ ನಮ್ಮ ಎಲ್ಲಾ ಭೇದ ಭಾವಗಳನ್ನು ತೊರೆದು, ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಬೇಕು ಎಂದು ಕರೆ ನೀಡಿದರು.
ಅಲ್ಪಸಂಖ್ಯಾತರ ರಕ್ಷಣೆಗೆ ಸ್ವತಂತ್ರ ಭಾರತದಲ್ಲಿ ಅನೇಕ ಕಾನೂನುಗಳಿವೆ. ಆದರೆ, ಹಿಂದೂಗಳ ರಕ್ಷಣೆಗಾಗಿ ಯಾವುದೇ ಕಾನೂನುಗಳಿಲ್ಲ. ಹಿಂದುತ್ವವನ್ನು ಒಡೆಯುವ ಅಜೆಂಡಾದೊAದಿಗೆ ಕಮ್ಯುನಿಷ್ಟರು, ಪ್ರಗತಿಪರರು ಹಾಗೂ ಇನ್ನೂ ಅನೇಕರು ಒಟ್ಟಾಗುತ್ತಿದ್ದಾರೆ. ವಿದೇಶಗಳಲ್ಲಿಯೂ ಕೂಡಾ ಹಿಂದುತ್ವವನ್ನು ಒಡೆಯುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ನಾವೆಲ್ಲರೂ ಕೂಡಲೇ ಜಾಗೃತರಾಗಬೇಕು. ನಮ್ಮಲ್ಲಿ ಇಚ್ಛಾಶಕ್ತಿ ಮತ್ತು ಛಲವಿರಬೇಕು. ನಮ್ಮ ನಡುವೆ ಏನೇ ಬೇದ ಭಾವ ಇದ್ದರೂ ಮರೆತು, ಧರ್ಮ ರಕ್ಷಣೆ ಗೋಸ್ಕರ ಎಲ್ಲಾ ಸಂಘಟನೆಗಳು ಒಟ್ಟಾಗುವ ಸಂಕಲ್ಪ ಮಾಡಬೇಕು ಎಂದರು.
ಸನಾತನ ಸಂಸ್ಥೆಯ ಲಕ್ಷ್ಮಿ ಪೈ ಮಾತನಾಡಿ, ಅನಾದಿ ಮತ್ತು ಅನಂತವಾಗಿರುವ ಈ ಹಿಂದೂ ಧರ್ಮ ನಮ್ಮ ಈ ಪುಣ್ಯಭೂಮಿ ಭಾರತದ ಪ್ರಾಣವಾಗಿದೆ. ಧರ್ಮ ನಿರಪೇಕ್ಷತೆಯ ಸೋಗಿನಲ್ಲಿ ಇವತ್ತು ಹಿಂದೂಗಳು, ಹಿಂದುತ್ವ ಹಾಗೂ ಹಿಂದೂ ಧರ್ಮ ಎಲ್ಲವೂ ಇವತ್ತು ಅಸುರಕ್ಷಿತ ವಾತಾವರಣದಲ್ಲಿ ನಾವು ಜೀವಿಸುತ್ತಾ ಇದ್ದೇವೆ. ಇದೆಲ್ಲವೂ ಬದಲಾಗಬೇಕಾದರೆ ನಾವು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧ್ವನಿ ಎತ್ತಬೇಕಾಗಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಮಾತನಾಡಿ, ಭಗವಂತನ ಕೃಪೆ, ಸಂತ ಮಹಾತ್ಮರ ಸಂಕಲ್ಪದಿAದ ಹಿಂದೂ ರಾಷ್ಟ್ರದ ಸ್ಥಾಪನೆ 2025ಕ್ಕಿಂತ ಮೊದಲು ಭಾರತದಲ್ಲಿ, ತದನಂತರ ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ. ಕಳೆದ 20 ವರ್ಷಗಳಿಂದ ಸಮಿತಿಯು ಹಿಂದೂ ಸಂಘಟನೆಗಳನ್ನು ಜೋಡಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು, ಶಿಬಿರಗಳನ್ನು ಆಯೋಜಿಸಿ ಹಿಂದೂಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಾವೆಲ್ಲರೂ ಈ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತನು, ಮನ, ಧನ ಸಮಯ ಬಂದರೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕಾಗಿದೆ ಎಂದು ಹೇಳಿದರು