ಉಡುಪಿ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ “ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಆಗಸ್ಟ್ 6 ಆದಿತ್ಯವಾರದಂದು ಉಡುಪಿ ಅಂಬಾಗಿಲಿನಲ್ಲಿರುವ “ಅಮೃತ್ ಗಾರ್ಡನ್ ಆಡಿಟೋರಿಯಂ” ನಲ್ಲಿ ನಡೆಯಲಿದೆ.
ಮಣಿಪಾಲ ಹೌಸಿಂಗ್ ಫೈನಾನ್ಸ್ ಮತ್ತು ಸಿಂಡಿಕೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ತೋನ್ಸೆ ನಾರಾಯಣ ಪೈ ಉದ್ಘಾಟಸಲಿದ್ದು, ಕಲ್ಯಾಣಪುರ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅನಂತ ಪದ್ಮನಾಭ ಕಿಣಿಯವರು ಅಧ್ಯಕ್ಷತೆ ವಹಿಸಿಲಿರುವರು.
ಅಪರಾಹ್ನ 12ರಿಂದ 1 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ “ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಹಾಗೂ ಸಂಸ್ಕಾರಯುತ ನಡವಳಿಕೆಗಳ”ಬಗ್ಗೆ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರವನ್ನು ತ್ರಿಶಾ ವಿದ್ಯಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ನಡೆಸಿಕೊಡಲಿರುವರು.
ಎಸ್.ಎಸ್.ಎಲ್. ಸಿ, ಪಿಯುಸಿ ಪದವಿ ತರಗತಿಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ದಾಖಲಿಸಿದ ವಿದ್ಯಾರ್ಥಿಗಳಿಗೆ ಹಾಗೂ ಇತ್ತೀಚೆಗೆ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಪಿಎಚ್ಡಿ ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ “ವಿಶೇಷ ಪ್ರತಿಭಾ ಪುರಸ್ಕಾರ” ಹಾಗೂ ಎಸ್. ಎಸ್. ಎಲ್. ಸಿ ಸಂಸ್ಕೃತ ವಿಷಯದಲ್ಲಿ 100 ಅಂಕಗಳ ಸಾಧನೆಗೈದ ವಿದ್ಯಾರ್ಥಿಗಳಿಗೆ ದಿವಂಗತ ಪಡುಬಿದ್ರೆ ದೇವಿದಾಸ ಶರ್ಮ ಸ್ಮಾರಕ ಪುರಸ್ಕಾರ ಪ್ರದಾನ ನಡೆಯಲಿರುವುದು.
ಮಧ್ಯಾಹ್ನ 2 ಗಂಟೆಯಿAದ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ರವರು ವಹಿಸಲಿದ್ದು, ದಿಕ್ಸೂಚಿ ಭಾಷಣವನ್ನು ಇನ್ವೆಂಜರ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಸತ್ಯೇಂದ್ರ ಪೈಯವರು ಮಾಡಲಿರುವರು.
ಈ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ಯೋಜನೆ ಯಡಿಯಲ್ಲಿ 500 ಕ್ಕೂ ಹೆಚ್ಚಿನ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ “ಶೈಕ್ಷಣಿಕ ದತ್ತು ಯೋಜನೆ”ಯ ಮೂಲಕ ಸುಮಾರು 75 ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ವಿತರಿಸಲಿದೆ ಎಂದು ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ ,ಸತೀಶ್ ಹೆಗಡೆ, ಕೋಟ, ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಹಾಗೂ ” ವಿದ್ಯಾ ಪೋಷಕ ನಿಧಿ” ವಿದ್ಯಾರ್ಥಿ ವೇತನ ಯೋಜನೆಯ ಅಧ್ಯಕ್ಷರಾದ ಸಿಎ ಎಸ್.ಎಸ್. ನಾಯಕ್ ಹಾಗೂ ಸಂಚಾಲಕರಾದ ವಿಜಯಕುಮಾರ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.