Share this news

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕ್ಯಾಮರಾ ಇಟ್ಟ ವಿದ್ಯಾರ್ಥಿಗಳು, ನಾಳೆ ಬಾಂಬ್ ಇಡುತ್ತಾರೆ ಬಿಜೆಪಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಪ್ರಕ್ರರಣ ಸಂಬಂಧ ರಾಜ್ಯ ಬಿಜೆಪಿ ನಾಯಕರು ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಕ್ಕಳಾಟ ಎಂದಿದ್ದಾರೆ. ಅವರ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಬಿಜೆಪಿ ಘಟಕ ಇಂದು (ಜು.28) ಕಡಿಯಾಳಿ ಬಿಜೆಪಿ ಕಛೇರಿಯಿಂದ ಎಸ್ಪಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.

ಈ ವೇಳೆ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಿಸ್ಟೇಕ್ ಆಗಿ ಕ್ಯಾಮೆರಾ ಬಂತು ಎಂದು ಹೇಳಿದ್ದಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಿ. ನಿನ್ನೆ ಖುಷ್ಬೂ ಅಕ್ಕನಿಗೆ ಸ್ವಲ್ಪ ಗಡಿಬಿಡಿಯಾಗಿದೆ. ಅವರು ಹಿಡನ್ ಕ್ಯಾಮೆರಾ ಇರಲಿಲ್ಲ ಅಂತ ಹೇಳಿದರು. ನಾವು ಹಿಡನ್ ಕ್ಯಾಮೆರಾ ಇತ್ತು ಅಂತಾ ಹೇಳಿಲ್ಲ. ಅವರಿಗೆ ಮಾಹಿತಿ ನೀಡಿದವರು ತಪ್ಪು ಮಾಹಿತಿ ನೀಡಿದ್ದಾರೆ. ಹಿಂದೂ ಸಂಘಟನೆಗಳು 25 ವರ್ಷಗಳಿಂದ ಜಿಹಾದಿ ನೆಟ್‌ವರ್ಕ್ ಬಗ್ಗೆ ಹೇಳುತ್ತಿದೆ. ಈಗ ನಾವು ಹೇಳಿದ ಮಾತುಗಳೆಲ್ಲ ನಿಜವಾಗಿದೆ. ಉಡುಪಿ ಮೊಬೈಲ್ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *