Share this news

ಉಡುಪಿ: ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸ್ಟೇಬಲ್  ಆಗಿರುವ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಶಂಕರ್ ಅವರಿಗೆ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸಾಧನೆಗೆ ರಾಷ್ಟçಪತಿ ಪದಕ ಒಲಿದಿದೆ. ಬಿಜೂರು ಗ್ರಾಮದ ಕಾಡಿನತಾರಿ ನಿವಾಸಿಯಾಗಿರುವ ಶಂಕರ್ ಅವರು ಸುಬ್ಬಯ್ಯ ಪೂಜಾರಿ ಮತ್ತು ಮುಕಾಂಬು ಇವರ ಪುತ್ರರಾಗಿದ್ದಾರೆ. ಶಂಕರ್ ಅವರು ಕಳೆದ 1999ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು, ಉಡುಪಿ ಜಿಲ್ಲೆಯಲ್ಲಿಯೇ ತರಬೇತಿ ಪಡೆದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಇಲಾಖೆ ವತಿಯಿಂದ ಪಿ.ಡಿ.ಎಂ.ಎಸ್ ವಾಹನ ಚಾಲನಾ ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆದು ಪ್ರಸ್ತುತ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಬಾಲ್ಯದಿಂದಲೇ ಉತ್ಸಾಹಿ ಕ್ರೀಡಾಪಟು ಆಗಿರುವ ಶಂಕರ್ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕ್ರೀಡಾಭ್ಯಾಸ ಮಾಡಿಕೊಂಡು ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಬೇರೆ ಬೇರೆ ಇಲಾಖೆ ,ಸಂಸ್ಥೆಗಳು ಆಯೋಜಿಸಿರುವ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪೊಲೀಸ್ ಗರುಡ ವಾಹನದಲ್ಲಿ 2005 ರಿಂದ 2007 ರವರೆಗೆ ಕರ್ತವ್ಯ ನಿರ್ವಹಿಸಿ ನೂರಾರು ಜನರ ಪ್ರಾಣರಕ್ಷಣೆ ಮತ್ತು ಶವಗಳನ್ನು ಸಾಗಿಸುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಜಿಲ್ಲಾ ಪೊಲೀಸ್ ವಿಶೇಷ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ನಕ್ಸಲ್ ಕೂಂಬಿAಗನಲ್ಲೂ ಭಾಗವಹಿಸಿದ್ದಾರೆ.


ಪ್ರಸ್ತುತ ಡಿ.ಎ.ಆರ್. ಘಟಕದಲ್ಲಿ ಗಣ್ಯವ್ಯಕ್ತಿಗಳ ಬೆಂಗಾವಲು ಪಡೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಶಂಕರ್ ಅವರು ಇವರು 2020 ನೇ ಸಾಲಿನಲ್ಲಿ ನಿರ್ವಹಿಸಿದ ಉತ್ತಮ ಕರ್ತವ್ಯಕ್ಕಾಗಿ ರಾಜ್ಯ ಸರಕಾರದಿಂದ ಮುಖ್ಯಮಂತ್ರಿಗಳ ಪದಕವನ್ನು ಪಡೆದಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವಾದಕ್ಷತೆಗಾಗಿ ಪ್ರಸ್ತುತ ರಾಷ್ಟ್ರಪತಿ ಪದಕವನ್ನು ಪಡೆದು ಇಲಾಖೆಗೆ ಮಾತ್ರವಲ್ಲದೇ ತನ್ನ ಹುಟ್ಟೂರಿಗೂ ಗೌರವ ತಂದಿದ್ದಾರೆ. ಶಂಕರ್ ಅವರು ಪತ್ನಿ ಶ್ರೀಮತಿ ಜ್ಯೋತಿ (ಪ್ರಾಥಮಿಕ ಶಾಲಾ ಶಿಕ್ಷಕಿ) ಹಾಗೂ ಇಬ್ಬರು ಪುತ್ರರಾದ ಶೌರ್ಯ ಮತ್ತು ಕಶ್ಯಪ್ ಇವರೊಂದಿಗೆ ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದಲ್ಲಿ ವಾಸವಿದ್ದಾರೆ.

 

 

 

 

 

Leave a Reply

Your email address will not be published. Required fields are marked *