ಉಡುಪಿ: ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಪಟ್ಟಿ ಪ್ರಕಟಗೊಂಡಿದ್ದು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 34 ಸಾಧಕರಿಗೆ ನಾಳೆ ಕನ್ನಡ ರಾಜ್ಯೋತ್ಸವದಂದು ಉಡುಪಿ ಜಿಲ್ಲಾಡಳಿತದ ವತಿಯಿಂದ ಗೌರವಿಸಲಾಗುತ್ತಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಹೆಬ್ರಿ ತಾಲೂಕಿನ ಬೇಳಂಜೆ ಮಹಾಬಲ ನಾಯ್ಕ್, ಬೈಂದೂರಿನ ನಾಗೇಂದ್ರ ರಾವ್ ಉಪ್ಪುಂದ, ಕುಂದಾಪುರ ತಾಲೂಕಿನ ಆಜ್ರಿ ಗೋಪಾಲ ಗಾಣಿಗ, ಬ್ರಹ್ಮಾವರ ತಾಲೂಕಿನ ಹಾವಂಜೆ ಮಂಜುನಾಥ್ ರಾವ್, ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಕೃಷ್ಣಮೂರ್ತಿ ಊರಾಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ದೈವಾರಾಧನೆ ಕ್ಷೇತ್ರದಲ್ಲಿ ಸಾಧನೆಗೈದ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಬೀರು ಪಾಣಾರ, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಅಶೋಕ್ ಶೆಟ್ಟಿ ಮಾಳ, ಕಣಜಾರು ಗ್ರಾಮದ ಕೆ ಗೋವಿಂದ ಬಂಗೇರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿಯಲಿದೆ.
ರಂಗಭೂಮಿ ವಿಭಾಗದಲ್ಲಿ ಉಡುಪಿ ತಾಲೂಕಿನ ಗಂಗಾಧರ್ ಕಿದಿಯೂರು ಅವರಿಗೆ ಜಿಲ್ಲಾ ಪ್ರಶಸ್ತಿ ಒಲಿದರೆ, ಕುಂದಾಪುರ ತಾಲೂಕಿನ ಬಿ ಕೃಷ್ಣ ದೇವಾಡಿಗ ಅವರಿಗೆ ಚಿತ್ರಕಲೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಸುರೇಶ ಸಾಲಿಯಾನ್ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಪ್ರಶಸ್ತಿ ಒಲಿದಿದೆ.
ಭರತನಾಟ್ಯ ಶಿಕ್ಷಕಿ ಹಾಗೂ ಯಕ್ಷಗಾನ ಕಲಾವಿದೆ ಆಗಿರುವ ಉಡುಪಿ ತಾಲೂಕಿನ ವಿದುಷಿ ಭಾಗಿರಥಿ ಎಂ ರಾವ್ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಸಾಹಿತ್ಯ ವಿಭಾಗದಲ್ಲಿ ಕಾರ್ಕಳ ತಾಲೂಕಿನ ಜ್ಯೋತಿ ಗುರುಪ್ರಸಾದ್, ನಾಟಿ ವೈದ್ಯ ಕ್ಷೇತ್ರದಲ್ಲಿ ಹೆಬ್ರಿ ತಾಲೂಕಿನ ಕುರ್ಪಾಡಿ ಭೋಜನಾಯಕ ಕಾಪು ತಾಲೂಕಿನ ಕೆ ವಸಂತಿ ತಂತ್ರಿ ಅವರಿಗೆ ಪ್ರಶಸ್ತಿ ಒಲಿದಿದೆ
ಉಡುಪಿ ತಾಲೂಕಿನ ಪಿ ಯಜ್ಞನಾರಾಯಣ ಭಟ್ ಅವರಿಗೆ ಅತ್ಯುತ್ತಮ ಪಾಕತಜ್ಞ ವಿಭಾಗದಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಒಲಿದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಉಡುಪಿ ತಾಲೂಕಿನ ಡಾ. ಎ ಸುಬ್ಬಣ್ಣ ಶೆಟ್ಟಿ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರ ತಾಲೂಕಿನ ಸತೀಶ್ ಖಾರ್ವಿ, ಕಾರ್ಕಳ ತಾಲೂಕಿನ ಆಯುಷ್ ಶೆಟ್ಟಿ, ಕಾರ್ಕಳ ತಾಲೂಕಿನ ವಿದ್ಯಾ ಯು ಶೆಟ್ಟಿ, ದಿವ್ಯಾಂಗ ಕ್ರೀಡಾ ವಿಭಾಗದಲ್ಲಿ ಕುಂದಾಪುರ ತಾಲೂಕಿನ ಪೃಥ್ವಿರಾಜ್ ಶೆಟ್ಟಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಸಂಕೀರ್ಣ ವಿಭಾಗದಲ್ಲಿ ಡಾಕ್ಟರ್ ಗಣನಾಥ ಶೆಟ್ಟಿ ಎಕ್ಕಾರು, ಕೃಷಿ ವಿಭಾಗದಲ್ಲಿ ಬ್ರಹ್ಮಾವರ ತಾಲೂಕಿನ ಭಾಸ್ಕರ ಪೂಜಾರಿ, ಬೈಂದೂರು ತಾಲೂಕಿನ ಬಾಬು ಆಚಾರ್ಯ, ಬ್ರಹ್ಮಾವರ ತಾಲೂಕಿನ ಜಯರಾಮ್ ಶೆಟ್ಟಿ, ಕಾಪು ತಾಲೂಕಿನ ಶಿವರಾಮ ಶೆಟ್ಟಿ ಇವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಗೌರವ ಒಲಿದಿದೆ.
ಸಮಾಜ ಸೇವೆ ವಿಭಾಗದಲ್ಲಿ ಹೆಬ್ರಿ ತಾಲೂಕಿನ ಎಚ್ ಭಾಸ್ಕರ ಜೋಯಿಸ್, ಕಾರ್ಕಳ ತಾಲೂಕಿನ ಅನಿತಾ ಡಿಸೋಜ, ಕಾರ್ಕಳ ತಾಲೂಕಿನ ಕಸಬಾದ ಆಯೀಷಾ ಕಾರ್ಕಳ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ
ಪತ್ರಿಕೋದ್ಯಮ ವಿಭಾಗದಲ್ಲಿ ಉಡುಪಿ ತಾಲೂಕಿನ ಹರೀಶ್ ಕುಂದರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಇದಲ್ಲದೇ ಈ ಬಾರಿ 4 ಸಂಘ ಸಂಸ್ಥೆಗಳಿಗೂ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು, ಕಾಪು ತಾಲೂಕಿನ ಕುತ್ಯಾರು ಯುವಕ ಮಂಡಲ, ಬ್ರಹ್ಮಾವರ ತಾಲೂಕಿನ ಅಜಪುರ ಕರ್ನಾಟಕ ಸಂಘ, ಕಾರ್ಕಳ ಛತ್ರಪತಿ ಫೌಂಡೇಶನ್, ಉಡುಪಿ ತಾಲೂಕಿನ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಈ ಸಂಘ ಸಂಸ್ಥೆಗಳು ಮಾಡಿರುವ ಅತ್ಯುತ್ತಮ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಗುರುತಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನವೆಂಬರ್ 1 ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ