Share this news

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಜ. 16 ರಿಂದ 22 ರವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ .

ತರಬೇತಿ ಪಡೆಯಲಿಚ್ಚಿಸುವ ಉಡುಪಿ ಜಿಲ್ಲೆಯ ಆಸಕ್ತ ನಾಗರಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ ಡಿಎಆರ್ ಕೇಂದ್ರ ಸ್ಥಾನದಿಂದ ಅರ್ಜಿ ಪಡೆದುಕೊಂಡು ಭರ್ತಿಗೊಳಿಸಿ ಅರ್ಜಿ ಸಲ್ಲಿಸಬೇಕೆಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರ ಕಛೇರಿ, ಉಡುಪಿ 948080 5406 ಅಥವಾ ಪೊಲೀಸ್ ನಿರೀಕ್ಷಕರ ಕಛೇರಿ ಉಡುಪಿ 90352072 69 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *