Share this news

ಉಡುಪಿ : ಕಾಂಗ್ರೆಸ್ ಸರ್ಕಾರ ಬಂದಿದೆ ನಾವು ಕರೆಂಟ್  ಬಿಲ್ ಕಟ್ಟಲ್ಲ ಎಂದು ಗ್ರಾಮಸ್ಥರು ಬೆಸ್ಕಾಂ ಮೀಟರ್ ರೀಡರ್ ಗೆ ಅವಾಜ್ ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿತ್ತು. ಇದೀಗ ಉಡುಪಿಯಲ್ಲಿ ನಮಗೆ ಕರೆಂಟ್ ಬಿಲ್ ಕೊಡಬೇಡಿ ಎಂದು ಮನೆ ಮಾಲೀಕರೊಬ್ಬರು ಮೀಟರ್ ಬೋರ್ಡ್ ಗೆ ಚೀಟಿ ಅಂಟಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು, ಈ ಹಿನ್ನೆಲೆ ಜನರು ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.ಉಡುಪಿಯ ಪೆರಂಪಳ್ಳಿ ನಿವಾಸಿ ವಾಸುದೇವ ಭಟ್ ಎಂಬುವವರು ಮೀಟರ್ ಬೋರ್ಡ್ ಗೆ ಚೀಟಿ ಅಂಟಿಸಿ ಮೆಸ್ಕಾಂಗೆ ಶಾಕ್ ನೀಡಿದ್ದಾರೆ. ಜೂನ್ ತಿಂಗಳಿನಿಂದ ನಾವು ಕರೆಂಟ್ ಬಿಲ್ ಕಟ್ಟಲ್ಲ ನಮಗೆ ಕರೆಂಟ್ ಬಿಲ್ ಕೊಡಬೇಡಿ ಎಂದು ಮೀಟರ್ ಬೋರ್ಡ್ ಕೆಳಗೆ ಚೀಟಿ ಅಂಟಿಸಿದ್ದಾರೆ.ಹಲವು ಕಡೆ ಜನರು ಮೀಟರ್ ಬೋರ್ಡ್ ಬಳಿ ಇದೇ ತರಹದ ಚೀಟಿ ಅಂಟಿಸುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದಿದೆ ನಾವು ಕರೆಂಟ್ ಬಿಲ್ಲ ಕಟ್ಟಲ್ಲ ಎಂದು ಗ್ರಾಮಸ್ಥರು ಬೆಸ್ಕಾಂ ಮೀಟರ್ ರೀಡರ್ ಗೆ ಅವಾಜ್ ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿತ್ತು . ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ಜನರು ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು, ಮೀಟರ್ ರೀಡರ್ ಗೆ ಅವಾಜ್ ಹಾಕಿದ್ದಾರೆ. ಆದರೆ ಆದೇಶ ಬರುವವರೆಗೂ ಬಿಲ್ ಕಟ್ಟಲೇಬೇಕು ಎಂದು ಹೇಳಿದರೂ ಕೂಡ ಜನರು ಕೇಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಹಿಂದೆ ಮೇ 15ರಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಜೂನ್ 1ರಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು ತಿಳಿಸಿದ್ದರು, ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಜನತೆ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *