ಉಡುಪಿ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕಾಮರ್ಸ್ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ದಿನದ ಹೂಡಿಕೆದಾರರ ಅರಿವು ಕಾರ್ಯಾಗಾರವು ವಿಭುಧೇಶ ತೀರ್ಥ ಸಭಾಂಗಣದಲ್ಲಿ ನಡೆಯಿತು.
ಇನ್ವೆಸ್ಟ್ ಮೆಂಟ್ ಸರ್ವಿಸ್ ಪ್ರೊಫೆಷನಲ್ ಎಲ್ಸ್ಟನ್ ನೀಲ್ ಮಿನೆಜಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಹೂಡಿಕೆಗಳ ಪ್ರಾಮುಖ್ಯತೆ ಮತ್ತು ಹಣಕಾಸು ಹೂಡಿಕೆಯ ಅವಕಾಶಗಳನ್ನು ತಿಳಿಸಿದರು.
ಎರಡನೇ ಆವೃತ್ತಿಯಲ್ಲಿ ಫ್ರಾಂಕ್ ಲಿನ್ ಟೆಂಪಲ್ ಟನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಲಿಯೋ ಅಮಲ್ ಹಣದ ಹೂಡಿಕೆಯ ವಿವಿಧ ಶಾಖೆಗಳ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ವಿನಾಯಕ್ ಪೈ,ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಗಿಳಿಯಾರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಲವೀಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸರಾದ ಗೌರಿ ಶೆಣೈ ಮತ್ತು ದೀಕ್ಷಿತಾ ಕಾರ್ಯಾಗಾರವನ್ನು ನಿರ್ವಹಿಸಿದರು.
ವಿಭಾಗದ ಉಪನ್ಯಾಸಕರಾದ ಚಿರಂಜನ್ ಶೇರಿಗಾರ್,ಚಕ್ರಪಾಣಿ ಅಡಿಗ,ರಾಮಕೃಷ್ಣ ನಾಯಕ್,ಕಾರ್ತಿಕ್ ನಾಯಕ್,ಪವಿತ್ರ ಸಹಕರಿಸಿದರು.