ಉಡುಪಿ :ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್ ಪಡೆದು ಬಂಧಿಸಲು ಬಂದ ಸಂದರ್ಭದಲ್ಲಿ ಆರೋಪಿ ಕೀಟನಾಶಕ ಸೇವಿಸಿ ಅಸ್ವಸ್ಥನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಡೆದಿದೆ .
ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 2017ರಲ್ಲಿ ನಡೆದ ಅಪರಾಧ ಪ್ರಕರಣವೊಂದರ ಆರೋಪಿಯಾಗಿದ್ದ ಮಂಗಳೂರಿನ ಮುಚ್ಚೂರು ಗ್ರಾಮದ ಕರುಣಾಕರ ಶೆಟ್ಟಿ (44 ವರ್ಷ) ಎಂಬವರ ವಿರುದ್ಧ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ಕರುಣಾಕರ ಶೆಟ್ಟಿ ಉಡುಪಿಯಲ್ಲಿರುವ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಜ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಗುರುಪ್ಪ ಕಾಂತಿ ಮತ್ತು ಸಿಬ್ಬಂದಿಗಳು ಆಗಸ್ಟ್ 24ರಂದು ಸಂಜೆ ವಾರೆಂಟ್ ಪಡೆದು ಆರೋಪಿಯನ್ನು ವಶಕ್ಕೆ ಪಡೆಯಲು ಆತ ಕೆಲಸ ಮಾಡಿಕೊಂಡಿರುವ ಬಾರ್ ಗೆ ಬಂದಿದ್ದರು. ಈ ವೇಳೆ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್ ನ ಮೇಲೆ ಇರುವ ರೂಮಿನೊಳಗೆ ಹೋದ ಕರುಣಾಕರ ಕೀಟನಾಶಕ ಸೇವನೆ ಮಾಡಿದ್ದಾನೆ. ಪರಿಣಾಮವಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದಾಗ ಅಸ್ವಸ್ಥಗೊಂಡಿದ್ದು, ಆತನಿಗೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿಸಿ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ .
ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.