ಉಡುಪಿ : ಜಿಲ್ಲೆಯಾದ್ಯಂತದ ಸ್ಮಶಾನ ಭುಮಿ ಅವಶ್ಯಕತೆಯಿದ್ದಲ್ಲಿ ಆಯಾ ಗ್ರಾಮದ ಅಥವಾ ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ಸ್ಮಶಾನ ಜಮೀನು ಕೋರಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು, ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ನಾಗರಿಕರು ತಹಶಿಲ್ದಾರರಿಗೆ, ಕಂದಾಯ ನಿರೀಕ್ಷಕರಿಗೆ ಅಥವಾ ಗ್ರಾಮ ಕರಣಿಕರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯ ಜತೆಗೆ ಹೆಸರು, ತಂದೆಯ ಹೆಸರು, ಆಧಾರ್ ಕಾರ್ಡ್ ನಂಬರ್ ಗ್ರಾಮದ ಹೆಸರು, ನಗರ, ಜಿಲ್ಲೆ ತಾಲೂಕು ಇತ್ಯಾದಿಗಳನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.