ಉತ್ತರಾಖಂಡ:ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದೊಳಗೆ ಕಳೆದ17 ದಿನಗಳಿಂದ ಬಂಧಿಯಾಗಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿ ಸುಖಾಂತ್ಯವಾಗಿದ್ದು, ರಕ್ಷಣಾ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯಿಂದ ಎಲ್ಲಾ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತರಲಾಗಿದೆ.
ಈ ಅಭೂತಪೂರ್ವ ಕಾರ್ಯಚರಣೆ ಮೂಲಕ 17 ದಿನಗಳ ಕಾಲ ಸಾವುಬದುಕಿನ ಹೋರಾಡಿ, ಕೊನೆಗೂ ಸಾವನ್ನು ಗೆದ್ದು ಕಾರ್ಮಿಕರು ಹೊರ ಬಂದಿದ್ದಾರೆ.
ಸಿಲ್ಕ್ಯಾರಾ ಸುರಂಗದ ಹೊರಗೆ ವೈದ್ಯರ ತಂಡದೊಂದಿಗೆ 41 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಹೊರ ಬಂದ ಕಾರ್ಮಿಕರಿಗೆ ಆದ್ಯತೆಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಮಿಕರ ಚಿಕಿತ್ಸೆಗೆ ಎನ್‌ಡಿಆರ್‌ಎಫ್ ತಂಡ ಕೂಡ ಸನ್ನದ್ಧವಾಗಿದೆ.
ಕಾರ್ಮಿಕರ ರಕ್ಷಣೆಗಾಗಿ ಮಳೆ, ಚಳಿಯ ನಡುವೆ ಕೊರೆಯುವ ಕೆಲಸ ಶರವೇಗದಲ್ಲಿ ನಡೆಸಿದ್ದು ಹಸ್ತಚಾಲಿತ ಕೊರೆತಕ್ಕಾಗಿ ಮೂರು ತಂಡಗಳು ಕಾರ್ಯನಿರ್ವಹಿಸಿದವು. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಪೈಪ್ ಮೂಲಕ ಆಹಾರ ಮತ್ತು ನೀರು ಸರಬರಾಜು ಮಾಡಲಾಗುತ್ತಿತ್ತು. ಜೊತೆಗೆ ವಾಕಿ ಟಾಕಿ ಮೂಲಕ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿತ್ತು.
ಮಂಗಳವಾರ ಈ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿ ನಡೆದಿದ್ದು ಇಡೀ ದೇಶವೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ
















